ಅತರ್ ಅಮೀರ್ ಖಾನ್ ಮತ್ತು ಟೀನಾ ದಾಬಿ 
ದೇಶ

ಇದು ಫಸ್ಟ್ ರ್ಯಾಂಕ್ ಟೀನಾ, ಸೆಕೆಂಡ್ ರ್ಯಾಂಕ್ ಅಮೀರ್ ನಡುವಿನ ಲವ್ ಸ್ಟೋರಿ

ಇದು ಫಸ್ಟ್ ರ್ಯಾಂಕ್ ರಾಜು ಕಥೆಯಲ್ಲ, ಕಳೆದ ವರ್ಷ ಐಎಎಸ್‌ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದಿದ್ದ ಅತರ್ ಅಮೀರ್ ಖಾನ್...

ನವದೆಹಲಿ: ಇದು ಫಸ್ಟ್ ರ್ಯಾಂಕ್ ರಾಜು ಕಥೆಯಲ್ಲ, ಕಳೆದ ವರ್ಷ ಐಎಎಸ್‌ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದಿದ್ದ ಅತರ್ ಅಮೀರ್ ಖಾನ್ ಮತ್ತು ಈ ವರ್ಷದ ಐಎಎಸ್ ಟಾಪರ್ ಟೀನಾ ದಾಬಿ ನಡುವಿನ ಪ್ರೇಮ್ ಕಹಾನಿ. 22 ವರ್ಷದ ಟೀನಾ ಇತ್ತೀಚೆಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ  ಇನ್ ಎ ರಿಲೇಶನ್ ಶಿಪ್ ವಿತ್ ಅಮೀರ್ ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ. ಮೊದಲ ರ್ಯಾಂಕ್‌ ಪಡೆದಿದ್ದ ಟೀನಾ ದಬಿ ಅವರು ಎರಡನೇ ರ್ಯಾಂಕ್‌ ಪಡೆದಿರುವ ಮುಸ್ಲಿಂ ಯುವಕ ಅಥರ್‌ ಆಮೀರ್–ಉಲ್‌–ಶಫಿ  ಖಾನ್‌ ಅವರನ್ನು ವಿವಾಹವಾಗಲು ಹೊರಟಿದ್ದಾರೆ. 
ನಾಗರಿಕ ಸೇವಾ ಪರೀಕ್ಷೆಯಲ್ಲಿ  ಮೊದಲ ಮತ್ತು ಎರಡನೇ ರ್ಯಾಂಕ್‌ ಪಡೆದಿದ್ದ ಟಿನಾ ಮತ್ತು ಆಮೀರ್ ಮೊದಲು ಭೇಟಿಯಾಗಿದ್ದು ‘ಲಾಲ್‌ ಬಹದ್ದೂರ್‌  ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಫಾರ್ ಆಡ್ಮಿನಿಸ್ಟ್ರೇಶನ್‌’ ತರಬೇತಿ ಕೇಂದ್ರದಲ್ಲಿ ಸನ್ಮಾನ ಸಮಾರಂಭದಲ್ಲಿ. ಇಬ್ಬರ ಭೇಟಿ ಪರಿಚಯ, ಸ್ನೇಹವಾಗಿ ಅದು ಪ್ರೀತಿಗೆ ತಿರುಗಿ ಇದೀಗ ಮದುವೆ ಹಂತಕ್ಕೆ ಬಂದು ನಿಂತಿದೆ.
ಟೀನಾ ಪೋಷಕರು ತಮ್ಮ ಮಗಳ ಆಯ್ಕೆಯನ್ನು ಮನಸ್ಪೂರ್ತಿ ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ ಆಮೀರ್ ಪೋಷಕರು ಮದುವೆಗೆ ಹಸಿರು ನಿಶಾನೆ ತೋರಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಆದರೆ ಇವರಿಬ್ಬರೂ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಸಮಾಜದ ಕೆಲ ವರ್ಗದವರಿಂದ ಟೀಕೆಗಳು ಕೇಳಿಬರುತ್ತಿವೆಯಂತೆ. ದಲಿತ ಸಮುದಾಯಕ್ಕೆ ಸೇರಿದ ಟೀನಾ ತಮ್ಮ ಪ್ರೇಮ ಮತ್ತು ಮದುವೆಯ ವಿಷಯವನ್ನು ಫೇಸ್‌ಬುಕ್‌ ಮತ್ತು ಟ್ವೀಟರ್‌ ಪುಟಗಳಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಅಂತರ ಧರ್ಮೀಯ ವಿವಾಹವನ್ನು ಕೆಲವರು ಸ್ವಾಗತಿಸಿದರೆ, ಮತ್ತೆ ಕೆಲವರು ಖಂಡಿಸಿ ಕೆಟ್ಟ ಕೆಟ್ಟ ಪದಗಳಲ್ಲಿ ಸಂದೇಶಗಳನ್ನು ಹಾಕುತ್ತಿದ್ದಾರೆ ಎಂದು ಟೀನಾ ನೊಂದು ನುಡಿಯುತ್ತಾರೆ.
ಆದರೆ ಬಹುತೇಕ ಮಂದಿ ಟೀನಾ ಅವರ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರಂತೆ. ಅದಕ್ಕೆ ಅವರು ಖುಷಿಪಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ