ದೇಶ

ಮನಮೋಹನ್ ಸಿಂಗ್ ಅವರು ತಮ್ಮ ನಾಯಕರಿಗೆ ನಿಷ್ಠೆ ತೋರಿಸುತ್ತಿದ್ದಾರೆ, ದೇಶದ ಜನರಿಗಾಗಿ ಅಲ್ಲ: ಬಿಜೆಪಿ

Sumana Upadhyaya
ನವದೆಹಲಿ: ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿನ್ನೆ ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆಗೆ ಟೀಕಿಸಿರುವ ಬಿಜೆಪಿ, ಮಾಜಿ ಪ್ರಧಾನಿಯವರು ತಮ್ಮ ನಾಯಕರಿಗೆ ಬೇಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಹೊರತು ಭಾರತ ದೇಶದ ಜನರಿಗಾಗಿ ಅಲ್ಲ ಎಂದು ಹೇಳಿದೆ.
ಇಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಜಿ ವಿಎಲ್ ನರಸಿಂಹ ರಾವ್, ವಾಸ್ತವವಾಗಿ 2004ರಲ್ಲಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ನಿಂದ ವೈಯಕ್ತಿಕವಾಗಿ ನಿಷೇಧಕ್ಕೊಳಗಾಗಿದ್ದರು. ಅವರಿಗೆ ಕಟ್ಟುನಿಟ್ಟು ಹೇರುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರು.ತಮಗೆ ಏನನ್ನಿಸಿತೋ ಅದನ್ನು ಮಾತನಾಡುವ ಅಧಿಕಾರ ಮನಮೋಹನ್ ಸಿಂಗ್ ಅವರಿಗಿರಲಿಲ್ಲ. ಅವರು ಪ್ರಧಾನಿಯಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಪಕ್ಷದ ನಾಯಕತ್ವವನ್ನು ಕೂಡ ಅವರು ಪ್ರಶ್ನಿಸಲಿಲ್ಲ. ಅವರು ಸೋನಿಯಾ ಗಾಂಧಿಯವರಿಂದ ನೇಮಕಗೊಂಡ ನಾಮಾಂಕಿತ ಪ್ರಧಾನಿಯಾಗಿದ್ದರಷ್ಟೆ. ಹಾಗಾಗಿ ಇಂದಿನ ಸರ್ಕಾರದ ಬಗ್ಗೆ ಅವರು ಏನೇ ಹೇಳುವುದಿದ್ದರೂ ಅವರು ರಾಹುಲ್ ಗಾಂಧಿಯವರು ಹೇಳಬೇಕಾಗಿದ್ದುದನ್ನು ಹೇಳುತ್ತಿದ್ದಾರಷ್ಟೆ. ನಿಜವಾಗಿಯೂ ಅವರ ಮನಸ್ಸಿನಿಂದ ಹೊರಬರುವ ಮಾತುಗಳು ಅವಲ್ಲ. ತಮ್ಮ ನಾಯಕರಿಗಾಗಿ ಕರ್ತವ್ಯ ಮಾಡುತ್ತಿದ್ದಾರೆ ಎಂದು ರಾವ್ ಕಟುವಾಗಿ ಟೀಕಿಸಿದರು.
ಹಿಂದಿನ ಯುಪಿಎ ಸರ್ಕಾರವನ್ನು ಟೀಕಿಸಿದ ಅವರು, ನೋಟುಗಳ ರದ್ದತಿ ಕುರಿತು ಹಿಂದಿನ ಯುಪಿಎ ಸರ್ಕಾರ ಕೂಡ ಪರಿಗಣಿಸಿತ್ತು. ಆದರೆ ಅದನ್ನು ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ, ರಾಜಕೀಯ ಅಧಿಕಾರ ಅವರಲ್ಲಿರಲಿಲ್ಲ. ತಾವೇ ನಿರ್ಧಾರ ತೆಗೆದುಕೊಳ್ಳುವ ನಾಯಕತ್ವ ಅಧಿಕಾರ ಮನಮೋಹನ್ ಸಿಂಗ್ ಅವರಿಗಿರಲಿಲ್ಲ. ಹಣದ ವಹಿವಾಟು ಕುರಿತು ಹೇಳುವುದಾದರೆ, ಅವರ ಸರ್ಕಾರವೇ ಒಂದು ಸಲ ನಗದು ವಿನಿಮಯ ತೆರಿಗೆ ತಂದಿತ್ತು. ಹಾಗಾಗಿ ಪ್ರಸ್ತುತ ಸರ್ಕಾರವನ್ನು ಪ್ರಶ್ನಿಸುವುದು ಮನಮೋಹನ್ ಸಿಂಗ್ ಅವರಿಗೆ ಅಪಾಯದ ರಾಜಕೀಯ ಅವಕಾಶವಾದಿತನ. ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಂತೆ, ಉತ್ತಮ ಆಡಳಿತಗಾರನಂತೆ ಮಾತನಾಡುವುದನ್ನು ನಾವು ನಿರೀಕ್ಷಿಸುತ್ತೇವೆಯೇ ಹೊರತು ರಾಹುಲ್ ಗಾಂಧಿಯಂತೆ ಅಲ್ಲ ಎಂದು ಹೇಳಿದರು.
SCROLL FOR NEXT