ದೇಶ

ಮುದ್ರಣ ದೋಷ ಹೊಂದಿರುವ 500 ರೂ ಹೊಸ ನೋಟುಗಳನ್ನು ಬಳಸಬಹುದು: ಆರ್ ಬಿಐ

Srinivas Rao BV
ನವದೆಹಲಿ: 500 ರೂ ಮುಖಬೆಲೆಯ ಹೊಸ ನೋಟುಗಳಲ್ಲಿ ಮುದ್ರಣ ದೋಷ ಕಾಣಿಸಿಕೊಂಡಿರುವುದನ್ನು ಒಪ್ಪಿಕೊಂಡಿರುವ ಆರ್ ಬಿಐ ಈಗ ಅದನ್ನು ಹಾಗೆಯೇ ಬಳಕೆ ಮಾಡಬಹುದು ಎಂದು ಸ್ಪಷ್ಟನೆ ನೀಡಿದೆ. 
ಒಂದು ವೇಳೆ ಜನರಿಗೆ ಈ ಮುದ್ರಣ ದೋಷ ಕಂಡುಬಂದ ಹೊಸ 500 ರೂ ನೋಟುಗಳೊಂದಿಗೆ ವ್ಯವಹರಿಸುವುದು ಜನರಿಗೆ ಸಮಸ್ಯೆಯಾದರೆ ಅದನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಆರ್ ಬಿಐ ಸಾರ್ವಜನಿಕರಿಗೆ ತಿಳಿಸಿದೆ.  ಹೊಸ 500 ರೂ ನೋಟುಗಳಲ್ಲಿ . ಕೆಲವು ನೋಟುಗಳ ಹಿಂಬದಿಯಲ್ಲಿ ಮುದ್ರಣವೇ ಅಳಿಸಿ ಹೋಗಿದೆ ಮತ್ತೆ ಕೆಲವು ನೋಟುಗಳಲ್ಲಿ ಬಣ್ಣವೇ ಮಾಸಿ ಹೋಗಿದೆ. ಹೀಗಾಗಿ ಇಂತಹ ನೋಟುಗಳನ್ನು ಪಡೆದ ಜನ ಕಂಗಾಲಾಗಿ ನೋಟುಗಳು ಲಿಯೋ ನಕಲಿಯೋ ಎಂಬ ಗೊಂದಲಕ್ಕೀಡಾಗಿದ್ದರು ಹೊಸ 500ರು. ಮುಖಬೆಲೆಯ  ನೋಟುಗಳಲ್ಲಿ ಬಣ್ಣ ಏರುಪೇರಾಗಿದ್ದು, ಕೆಲ ನೋಟುಗಳು ಗಾಢ ಬಣ್ಣದಿಂದ ಕೂಡಿದ್ದು, ಮತ್ತೆ ಕೆಲ ನೋಟುಗಳು ತಿಳಿಬಣ್ಣದಿಂದ ಕೂಡಿವೆ. ಇದು ಜನರ ಆತಂಕಕ್ಕೆ ಕಾರಣವಾಗಿತ್ತು. 
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ನೋಟಿನ ಅಭಾವವಿದೆ. ಈ ಹಿನ್ನಲೆಯಲ್ಲಿ ಹೆಚ್ಚೆಚ್ಚು ನೋಟು ಮುದ್ರಣ ಮಾಡುವ  ತವಕದಲ್ಲಿ ಬಹುಶಃ ಕೆಲ ನೋಟುಗಳ ಮುದ್ರಣ ದೋಷಪೂರಿತವಾಗಿರಬಹುದು ಎಂದು ಆರ್ ಬಿಐ ಹೇಳಿದೆ. 
SCROLL FOR NEXT