ದೇಶ

2000 ರು. ನಕಲಿ ನೋಟ್ ಜಾಲ ಬೇಧಿಸಿದ ಹೈದರಾಬಾದ್ ಪೊಲೀಸರು, 6 ಮಂದಿ ಬಂಧನ

Lingaraj Badiger
ಹೈದರಾಬಾದ್: ಕೇಂದ್ರ ಸರ್ಕಾರ ಇತ್ತೀಚಿಗಷ್ಟೇ ಬಿಡುಗಡೆ ಮಾಡಿರುವ 2000 ರುಪಾಯಿ ನೋಟ್ ಸೇರಿದಂತೆ ಇತರೆ ಭಾರತೀಯ ನೋಟ್ ಗಳನ್ನು ಮುದ್ರಿಸಿ, ವಿತರಿಸುತ್ತಿದ್ದ ಜಾಲವನ್ನು ಹೈದರಾಬಾದ್ ಪೊಲೀಸರು ಶನಿವಾರ ಬೇಧಿಸಿದ್ದು, ಆರು ಮಂದಿಯ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.
ಇಬ್ರಾಹಿಂಪಟ್ಟಣದಲ್ಲಿ ದಾಳಿ ನಡೆಸಿದ ವಿಶೇಷ ಕಾರ್ಯಾಚರಣೆಯ ತಂಡ ನಕಲಿ ನೋಟ್ ಜಾಲದಲ್ಲಿ ತೊಡಗಿದ್ದ ಆರು ಬಂಧಿಸಿದೆ ಮತ್ತು ಬಂಧಿರಿಂದ ನೂತನ 2000 ರುಪಾಯಿ ನೋಟ್ ಹಾಗೂ ನಿಷೇಧಿತ 500 ಹಾಗೂ 1000 ರುಪಾಯಿ ನೋಟ್ ಸೇರಿದಂತೆ ಒಟ್ಟು 2,22,310 ರುಪಾಯಿ ಮೌಲ್ಯದ ನಕಲಿ ನೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಜಮಲಪುರ್ ಸಾಯಿನಾಥ್, ಜಿ.ಅಂಜಯ್ಯ, ಎಸ್.ರಮೇಶ್, ಸಿ. ಸತ್ಯನಾರಾಯಣ, ಕೆ.ಶ್ರೀಧರಗೌಡ ಹಾಗೂ ಎ ವಿಜಯ್ ಕುಮಾರ್ ಎಂದು ಗುರುತಿಸಲಾಗಿದ್ದು, ಇತರೆ ಇಬ್ಬರು ಆರೋಪಿಗಳಾದ ಕಲ್ಯಾಣ್ ಮತ್ತು ಶ್ರೀಕಾಂತ್ ತಪ್ಪಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳು 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ 50 ಹಾಗೂ 100 ರುಪಾಯಿ ಸೇರಿದಂತೆ ಕಡಿಮೆ ಮೌಲ್ಯದ ನೋಟ್ ಗಳನ್ನು ಮುದ್ರಿಸಿ ಮಾರುಕಟ್ಟೆಯಲ್ಲಿ ಚಲಾವಣೆ ಮಾಡಿದ್ದಾರೆ. ಅಲ್ಲದೆ 2000 ರುಪಾಯಿ ನೋಟ್ ಅನ್ನು ಯಶಸ್ವಿಯಾಗಿ ಮುದ್ರಿಸಿದ್ದು, ಅದನ್ನೂ ಚಲಾವಣೆ ಮಾಡಲು ಯತ್ಮಿಸುತ್ತಿದ್ದರು ಎಂದು ಭಾಗವತ್ ತಿಳಿಸಿದ್ದಾರೆ.
SCROLL FOR NEXT