ಕೊಲ್ಕೊತ್ತ: ಕೇಂದ್ರ ಸರ್ಕಾರ 500 ಹಾಗೂ 1000 ರು ಮುಖಬೆಲೆಯ ನೋಟು ನಿಷೇಧವನ್ನು ವಿರೋಧಿಸಿ ನವೆಂಬರ್ 28 ರಂದು ಎಡ ಪಕ್ಷಗಳು ದೇಶಾದ್ಯಂತ ಕರೆ ಕೊಟ್ಟಿರುವ ಪ್ರತಿಭಟನೆಗೆ ತೃಣ ಮೂಲ ಕಾಂಗ್ರೆಸ್ ವಿರೋಧ ವ್ಯಕ್ತ ಪಡಿಸಿದೆ.
ಎಡಪಕ್ಷಗಳು ಬಿಜೆಪಿ ಸರ್ಕಾರದ ನೋಟು ನಿಷೇಧಕ್ಕೆ ಬೆಂಬಲ ಸೂಚಿಸಬೇಕು, ಆದರೆ ಪ್ರತಿಭಟನೆಗೆ ಏಕೆ ಕರೆ ನೀಡಿವೆ ಎಂದು ತೃಣ ಮೂಲ ಕಾಂಗ್ರೆಸ್ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಸುಬ್ರತಾ ಬಕ್ಷಿ ಹೇಳಿದ್ದಾರೆ.
ನವೆಂಬರ್ 28 ರಂದು ಎಡಪಕ್ಷಗಳು ಕರೆ ನೀಡಿರುವ ಬಂದ್ ವಾಪಸ್ ಪಡೆಯಬೇಕು. ಅನಾಣ್ಯೀಕರಣದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಜನ ಏಕೆ ಬೆಂಬಲ ನೀಡುತ್ತಾರೆ ಎಂದು ಮಮತಾ ಬ್ಯಾನರ್ಜಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಎಡಪಕ್ಷಗಳು ನವೆಂಬರ್ 28 ರಂದು 12 ಗಂಟೆಗಳ ಬಂದ್ ಗೆ ಕರೆ ನೀಡಿವೆ.