ನವದೆಹಲಿ: ನಗದು ವಹಿವಾಟಿನ ಬದಲು ನಗದು ರಹಿತ ವಹಿವಾಟನ್ನು ಹೆಚ್ಚು ರೂಢಿಸಿಕೊಳ್ಳಲು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಓದಲು ಬಾರದ ರೈತರು ಹೇಗೆ ಇ-ಬ್ಯಾಂಕಿಂಗ್ ನ್ನು ನಡೆಸಲು ಸಾಧ್ಯ ಎಂದು ಕೇಳಿದ್ದಾರೆ.
ಮೊಬೈಲ್ ಬ್ಯಾಂಕಿಂಗ್/ಇ-ಬ್ಯಾಂಕಿಂಗ್ ಅತ್ಯುತ್ತಮವಾದದ್ದು, ಆದರೆ ನೀವು ಓದಲು ಬಾರದ ಲಕ್ಷಾಂತರ ಮಂದಿ ರೈತರು ಹಾಗೂ ಕಾರ್ಮಿಕರನ್ನು ಹೇಗೆ ಇ-ಬ್ಯಾಂಕಿಂಗ್ ರೂಢಿಸಿಕೊಳ್ಳಲು ಒತ್ತಾಯಿಸುತ್ತೀರಿ ಎಂದು ಮನೀಷ್ ಸಿಸೋಡಿಯಾ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ರೈತರು, ಕಾರ್ಮಿಕರಿಗೆ ಮೊಬೈಲ್ ಬ್ಯಾಂಕಿಂಗ್ ಬಳಕೆ ಮಾಡುವಂತೆ ಸಲಹೆ ನೀಡುವುದಕ್ಕೂ ಮುನ್ನ ನಿಮ್ಮ ಕಾರ್ಯದರ್ಶಿಗಳು ಹಾಗೂ ಸಂಸದರು ಇ-ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುತ್ತಾರಾ ಎಂಬುದನ್ನು ಪರಿಶೀಲಿಸಿ ಎಂದು ಮನೀಷ್ ಸಿಸೋಡಿಯಾ ಪ್ರಧಾನಿ ಮೋದಿ ಅವರನ್ನು ಕೇಳಿದ್ದು ಒಂದು ವೇಳೆ ಬಳಸದೇ ಇದ್ದಲ್ಲಿ ಅದನ್ನು ಸಾಮಾನ್ಯ ಜನರ ಮೇಲೆ ಹೇರಬೇಡಿ ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics