ದೇಶ

ಪ್ರಚೋದನೆ ನೀಡಿದ್ದೇ ಆದರೆ, ಶತ್ರುಗಳ ಕಣ್ಣು ಕಿತ್ತುಹಾಕುತ್ತೇವೆ: ಪರಿಕ್ಕರ್

Manjula VN

ಪಣಜಿ: ಭಾರತ ಎಂದಿಗೂ ಯುದ್ಧವನ್ನು ಬಯಸುವುದಿಲ್ಲ. ಪ್ರಚೋದನೆ ನೀಡಿದ್ದೇ ಆದರೆ ಶತ್ರುಗಳ ಕಣ್ಣನ್ನು ಕಿತ್ತುಹಾಕುತ್ತೇವೆಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಹೇಳಿದ್ದಾರೆ.

ಗೋವಾದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ನಾವು ಎಂದಿಗೂ ಮೊದಲ ದಾಳಿ ಮಾಡಲು ಹೋಗುವುದಿಲ್ಲ. ಭಾರತ ಎಂದಿಗೂ ಯುದ್ಧವನ್ನು ಬಯಸುವುದಿಲ್ಲ. ದೇಶವನ್ನು ಶತ್ರುಕಣ್ಣಿನಿಂದ ನೋಡಿದ್ದೇ ಆದರೆ, ಶತ್ರುಗಳ ಕಣ್ಣನ್ನು ಕಿತ್ತು ಅವರ ಕೈಗೆ ನೀಡುತ್ತೇವೆ. ಭಾರತಕ್ಕೆ ಆ ಶಕ್ತಿಯಿದೆ ಎಂದು ಹೇಳಿದ್ದಾರೆ.

ಶತ್ರುಗಳ ಕಪಾಳಕ್ಕೆ ನೇರವಾಗಿ ಹೊಡೆಯುವ ವ್ಯಕ್ತಿಯೊಬ್ಬನನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆಂದು ಗೋವಾ ವಿಶ್ವಕ್ಕೆ ಹೇಳಬಹುದು. ಮೊಲವನ್ನು ಭೇಟಿಯಾಡಲು ಹೋದರೆ, ಹುಲಿಯನ್ನು ಕೊಲ್ಲಲು ತಯಾರಾಗಿ ಹೋಗು ಎಂದು ನನ್ನ ತಾಯಿ ಹೇಳಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಪರಿಕ್ಕರ್ ಅವರು, ಸೀಮಿತ ದಾಳಿ ಬಳಿಕ ಗಡಿಯಲ್ಲಿ ಪರಿಸ್ಥಿತಿ ಉದ್ನಿಗ್ನವಾಗಿತ್ತು. ಪ್ರತೀನಿತ್ಯ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುವುದು ಸಾಮಾನ್ಯವಾಗಿತ್ತು. ಪಾಕಿಸ್ತಾನ ಸೈನಿಕರು ಪದೇಪದೇ ಕದನ ವಿರಾಮ ಉಲ್ಲಂಘನೆ ಮಾಡುವುದು, ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದ್ದರು. ಪಾಕಿಸ್ತಾನದ ಈ ವರ್ತನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ. ಅವರ ದಾಳಿಗೆ ನಾವು ನೀಡುತ್ತಿದ್ದ ಪ್ರತ್ಯುತ್ತರ ಅತ್ಯಂತ ಶಕ್ತಿಶಾಲಿಯಾಗಿತ್ತು. ಹೀಗಾಗಿ ಗಡಿಯಲ್ಲಿ ಕಳೆದೆರಡು ದಿನಗಳಿಂದ ಗುಂಡಿನ ದಾಳಿಗಳು ನಡೆಯುತ್ತಿಲ್ಲ ಎಂದು ಹೇಳಿದ್ದರು.

SCROLL FOR NEXT