ನವದೆಹಲಿ: ಯೋಧನ ಶಿರಚ್ಛೇದ ಮಾಡುವ ಮೂಲಕ ತನ್ನ ನೀಚ ಬುದ್ಧಿ, ರಾಕ್ಷಸ ವರ್ತನೆಯನ್ನು ಪ್ರದರ್ಶಸಿದ್ದ ಪಾಕಿಸ್ತಾನದ ಮುಖವಾಡ ಇದೀಗ ಕಳಚಿದ್ದು, ಯೋಧನ ಶಿರಚ್ಛೇದ ಮಾಡಿರುವ ಕುರಿತಂತೆ ಪಾಕಿಸ್ತಾನ ವಿರುದ್ಧ ಸಾಕ್ಷ್ಯಾಧಾರಗಳು ದೊರಕಿರುವುದಾಗಿ ಭಾರತೀಯ ಸೇನೆ ಮಂಗಳವಾರ ಹೇಳಿದೆ.
ಯೋಧನ ಶಿರಚ್ಛೇದ ಪ್ರಕರಣ ಕುರಿತಂತೆ ಸೇನೆ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದು, ಯೋಧರ ಹತ್ಯೆಯನ್ನು ಪಾಕಿಸ್ತಾನ ಸೈನಿಕರೇ ಮಾಡಿರುವುದಕ್ಕೆ ಸಾಕ್ಷ್ಯಾಧಾರಗಳನ್ನು ಬಹಿರಂಗಪಡಿಸಿದೆ. ಯೋಧರು ಹತ್ಯೆಯಾದ ಸ್ಥಳದಲ್ಲಿ ಸೇನೆಗೆ ಪಾಕಿಸ್ತಾನದ ವಿರುದ್ಧ ದಾಖಲೆಗಳು ಲಭ್ಯವಾಗಿದೆ ಎಂದು ಹೇಳಿದೆ.