ಸಿಪಿಇಸಿ ಸಂಬಂಧ ಪಾಕ್ ನೊಂದಿಗೆ ರಹಸ್ಯ ಮಾತುಕತೆ ವದಂತಿ ನಿರಾಕರಿಸಿದ ರಷ್ಯಾ
ನವದೆಹಲಿ: ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಗೌಪ್ಯ ಮಾತುಕತೆ ನಡೆಸುತ್ತಿರುವ ವರದಿಗಳನ್ನು ರಷ್ಯಾ ನಿರಾಕರಿಸಿದೆ.
ಸಿಪಿಇಸಿ ಯೋಜನೆಯಲ್ಲಿ ಭಾಗಿಯಾಗುವ ಬಗ್ಗೆ ರಷ್ಯಾ ಉತ್ಸಾಹ ತೋರಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ರಷ್ಯಾಗೆ ಗ್ವಾದರ್ ಬಂದನ್ನು ಬಳಸಲು ಅನುಮತಿ ನೀಡಲು ನಿರ್ಧರಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ವರದಿ ಮಾಡಿದ್ದ ಪಾಕ್ ಮಾಧ್ಯಮ ರಷ್ಯಾ ಸಿಪಿಇಸಿಗೆ ಸಂಬಂಧಿಸಿದಂತೆ ರಷ್ಯಾ ಪಾಕಿಸ್ತಾನದೊಂದಿಗೆ ರಹಸ್ಯ ಮಾತುಕತೆ ನಡೆಸುತ್ತಿದೆ ಎಂದು ಹೇಳಿತ್ತು. ಆದರೆ ಪಾಕ್ ಮಾಧ್ಯಮಗಳ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿರುವ ರಷ್ಯಾ, ಇದು ಸುಳ್ಳು ವರದಿ ಎಂದು ಸ್ಪಷ್ಟನೆ ನೀಡಿದೆ.
ಪಾಕಿಸ್ತಾನದೊಂದಿಗಿನ ವ್ಯಾಪಾರ ವಹಿವಾಟುಗಳಿಗೆ ಅದರದ್ದೇ ಆದ ಬೆಲೆ ಇದೆ. ವ್ಯಾಪಾರ ವಹಿವಾಟು ಸಂಬಂಧವನ್ನು ವೃದ್ಧಿಗೊಳಿಸುವ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೇವೆ ಎಂದು ರಷ್ಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.