ರಾಷ್ಟ್ರಪತಿ ಪ್ರಣಬ್ ಮುಖರ್ಜಿ 
ದೇಶ

ದೇಶದ ಜನತೆಗೆ ಗಾಂಧಿ ಜಯಂತಿ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ದೇಶದಾದ್ಯಂತ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ದೇಶದ ಜನತೆಗೆ ಭಾನುವಾರ ಶುಭಾಶಯ ಕೋರಿದ್ದಾರೆ...

ನವದೆಹಲಿ: ದೇಶದಾದ್ಯಂತ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ದೇಶದ ಜನತೆಗೆ ಭಾನುವಾರ ಶುಭಾಶಯ ಕೋರಿದ್ದಾರೆ.

ಗಾಂಧಿಯವರು ಶಾಂತಿಪ್ರಿಯರಾಗಿದ್ದವರು. ಅಹಿಂಸೆಯಿಂದಲೇ ನಡೆದು ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ಹೋರಾಡಿದ್ದರು. ಗಾಂಧಿಯವರ ಸತ್ಯ, ನೈತಿಕತೆ ಮತ್ತು ನೀತಿಯನ್ನು ಇಂದು ದೇಶದ ಜನತೆ ನೆನೆಯಬೇಕಿದೆ. ಸ್ವಚ್ಛ ಭಾರತ ಹಾಗೂ ಸಮರ್ಥ ಭಾರತದ ಕನಸನ್ನು ನನಸು ಮಾಡಲು ಎಲ್ಲರೂ ಸೇರಿ ದುಡಿಯೋಣ ಎಂದು ಹೇಳಿದ್ದಾರೆ.

ಗಾಂಧೀಜಿಯವರು ನಮಗೆ ಸಾಮರಸ್ಯ ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಹೇಳಿಕೊಟ್ಟಿದ್ದಾರೆ. ವ್ಯಕ್ತಿಯ ವ್ಯಕ್ತಿತ್ವ ಸಮಾಜವನ್ನು ಹಾಗೂ ರಾಜಕೀಯವನ್ನು ಹೇಗೆ ಬದಲಾವಣೆ ಮಾಡುತ್ತದೆ ಎಂಬುದನ್ನು ಹೇಳಿಕೊಟ್ಟಿದ್ದಾರೆ. ಗಾಂಧಿಯವರ ನಡೆ ಇಂದು ದೇಶದಲ್ಲಿರುವ ಪ್ರತೀಯೊಬ್ಬ ನಾಗರೀಕರನಿಗೂ ಆದರ್ಶವಾಗಿದೆ.

ಸ್ವಚ್ಛ ಭಾರತ ಗಾಂಧೀಜಿಯವರ ಕನಸಾಗಿತ್ತು. ಗಾಂಧೀಜಿಯವರ ಚಿಂತನೆಗಳನ್ನು ಅನುಸರಿಸಿ ನಾವೂ ಕೂಡ ದೇಶದ ಮುಂದೆ ಬರುವ ಎಲ್ಲಾ ಸವಾಲುಗಳನ್ನು ಎದುರಿಸೋಣ. ಗಾಂಧಿಯವರ ಸತ್ಯ, ನೈತಿಕತೆ ಹಾಗೂ ನೀತಿಯನ್ನು ಅನುಸರಿಸೋಣ. ಅಹಿಂಸಾತ್ಮಕ ತತ್ವವನ್ನು ಅನುಸರಿಸೋಣ. ಈ ಮೂಲಕ ಗಾಂಧೀಜಿಯವರ ಹುಟ್ಟುಹಬ್ಬಕ್ಕೆ ಗೌರವ ಸೂಚಿಸೋಣ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!