ಪಾಟ್ನಾ: ಬಿಹಾರ ಸರ್ಕಾರದ ಸಾರಾಯಿ ನಿಷೇಧಕ್ಕೆ ಪಾಟ್ನಾ ಹೈಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ , ಆದೇಶ ಪ್ರಶ್ನಿಸಿ ಸಿಎಂ ನಿತೀಶ್ ಕುಮಾರ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯ, ಅಕ್ಟೋಬರ್ 7ರಂದು ಬಿಹಾರ ಸರ್ಕಾರ ಸಲ್ಲಿಸಿರುವ ಈ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸುವುದು. ಬಿಹಾರ ಸರ್ಕಾರ ಜಾರಿಗೆ ತಂದಿರುವ ಸಾರಾಯಿ ನಿಷೇಧ ಕಾನೂನು ಬಾಹಿರವಾಗಿದೆ ಎಂದು ಪಾಟ್ನಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಬಿಹಾರ ಸರ್ಕಾರ ಸಾರಾಯಿ ನಿಷೇಧದ ಸಂಬಂಧ ಹೊಸ ನೀತಿ ನಿಯಮ ರೂಪಿಸಲು ಗಾಂಧಿ ಜಯಂತಿಯಂದು ನಿರ್ಣಯ ಕೈಗೊಂಡಿದೆ. ಭಾನುವಾರ ಈ ಸಂಬಂಧ ಸಂಪುಟ ಸಭೆ ನಡೆಸಿ, ಸರ್ಕಾರ ಸಮಾಜದ ಬದಲಾವಣೆಯ ದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.