ಆರ್ ಎಸ್ ಎಸ್ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ 
ದೇಶ

ಆರ್ ಎಸ್ ಎಸ್ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ನ್ನು ಕೃಷ್ಣನಿಗೆ ಹೋಲಿಸಿದ ಶಿವಸೇನೆ

ಗೋವಾದ ಆರ್ ಎಸ್ ಎಸ್ ನ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ಅವರನ್ನು ಶಿವಸೇನೆ ಮಹಾಭಾರತದ ಶ್ರೀಕೃಷ್ಣನಿಗೆ ಹೋಲಿಸಿದ್ದು, ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷವನ್ನು ಪಾಂಡವರಿಗೆ ಹೋಲಿಸಿದೆ.

ಪಣಜಿ: ಗೋವಾದ ಆರ್ ಎಸ್ ಎಸ್ ನ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ಅವರನ್ನು ಶಿವಸೇನೆ ಮಹಾಭಾರತದ ಶ್ರೀಕೃಷ್ಣನಿಗೆ ಹೋಲಿಸಿದ್ದು, ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷವನ್ನು ಪಾಂಡವರಿಗೆ ಹೋಲಿಸಿದೆ.

ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆರ್ ಎಸ್ ಎಸ್ ನ ವೆಲಿಂಗ್ಕರ್ ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷಗಳನ್ನು ಅಧಿಕಾರದತ್ತ ಮುನ್ನಡೆಸಲಿದ್ದಾರೆ ಎಂದು ಗೋವಾ ಶಿವಸೇನೆಯ ಮುಖ್ಯಸ್ಥ ಸುದೀಪ್ ತಮನ್ಕರ್ ಹೇಳಿದ್ದಾರೆ.

ಬಿಜೆಪಿಯವರನ್ನು ಕೌರವರು ಹಾಗೂ ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷಗಳನ್ನು ಪಾಂಡವರಿಗೆ ಹೋಲಿಸಿರುವ ಶಿವಸೇನೆ ಗೋವಾ ಚುನಾವಣೆಯಲ್ಲಿ ಮಹಾಭಾರತಕ್ಕೆ ಹೋಲಿಕೆ ಮಾಡಿದ್ದು ಕೃಷ್ಣ ಪಾಂಡವರನ್ನು ಗೆಲ್ಲಿಸಿದಂತೆ, ವೆಲಿಂಗ್ಕರ್ ಗೋವಾದಲ್ಲಿ ಬಿಜೆಪಿ, ಕಾಂಗ್ರೆಸ್ಸೇತರ ಪಕ್ಷಗಳನ್ನು ಗೆಲ್ಲಿಸಲಿದ್ದಾರೆ ಎಂದು ಸುದೀಪ್ ತಮನ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೋವಾದಲ್ಲಿ ಬಿಜೆಪಿ ಹಾಗೂ ಬಿಜೆಪಿಯೊಂದಿಗಿನ ಪಕ್ಷಗಳು ಗೋವಾದಲ್ಲಿ ಸೋಲು ಕಾಣಲಿವೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!