ವಾಂಖೆಡೆ ಕ್ರೀಡಾಂಗಣದಲ್ಲಿ ಭದ್ರತಾ ಸಿಬ್ಬಂದಿ ಜೊತೆ ಶಾರೂಕ್ ವಾಗ್ವಾದ(ಸಂಗ್ರಹ ಚಿತ್ರ)
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ ಫ್ರ್ಯಾಂಚೈಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲಿಕ ಬಾಲಿವುಡ್ ನಟ ಶಾರೂಕ್ ಖಾನ್ ಗೆ 2012ರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.
ಈ ಪ್ರಕರಣ ನಡೆದ ನಂತರ ಮುಂಬೈ ಕ್ರಿಕೆಟ್ ಸಂಸ್ಥೆ ಕಿಂಗ್ ಖಾನ್ ಗೆ ಐದು ವರ್ಷಗಳ ನಿಷೇಧ ಹೇರಿದ್ದು, ಅದು ಕಳೆದ ವರ್ಷ ತೆಗೆದುಹಾಕಲಾಯಿತು.ಪ್ರಕರಣದ ತನಿಖೆ ನಡೆಸಿದ ನಂತರ ಶಾರೂಕ್ ಖಾನ್ ಯಾವುದೇ ಗುರುತರ ಅಪರಾಧ ಮಾಡಿರುವುದು ಕಂಡುಬರುವುದಿಲ್ಲ ಎಂದು ಪೊಲೀಸರು ವರದಿ ಸಲ್ಲಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ್ದ ಕಾರ್ಯಕರ್ತರೊಬ್ಬರು ಐಪಿಎಲ್ ಪಂದ್ಯದ ವೇಳೆ ಕ್ರೀಡಾಂಗಣದ ಒಳಗೆ ಭದ್ರತಾ ಸಿಬ್ಬಂದಿಯನ್ನು ನಿಂದಿಸಿದ್ದಾಗಿ ಶಾರೂಕ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಇದಕ್ಕೆ ಪ್ರತಿ ಹೇಳಿಕೆ ನೀಡಿದ್ದ ಕಿಂಗ್ ಖಾನ್, ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ನಂತರ ಕ್ರೀಡಾಂಗಣದ ಒಳಗೆ ಪ್ರವೇಶಿಸಿದ್ದಕ್ಕಾಗಿ ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ಹೊರಹೋಗುವಂತೆ ಭದ್ರತಾ ಸಿಬ್ಬಂದಿ ವಿಕಾಸ್ ದಾಲ್ವಿ ಹೇಳಿದ್ದರು. ಈ ವೇಳೆ ತಮ್ಮ ವಿರುದ್ಧ ಅಸಭ್ಯವಾಗಿ ಯಾರೋ ಮಾತನಾಡಿದಾಗ ಸಿಟ್ಟು ಬಂತು ಎಂದು ಶಾರೂಕ್ ಖಾನ್ ಪೊಲೀಸರಿಗೆ ಹೇಳಿದ್ದರು.