ದ್ವಾರಕಾ ದೇವಾಲಯ 
ದೇಶ

ದ್ವಾರಕಾ ದೇವಾಲಯದ ಮೇಲೆ ಉಗ್ರರ ದಾಳಿ ಎಚ್ಚರಿಕೆ: ಹೆಚ್ಚಿನ ಭದ್ರತೆ

ಭಯೋತ್ಪಾದಕರು ದ್ವಾರಕಾ ದೇವಾಲಯದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಅಹಮದಾಬಾದ್: ಉರಿ ಸೇನಾ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ಹಾಗೂ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಬೆನ್ನಲ್ಲೇ ಭಯೋತ್ಪಾದಕರು ದ್ವಾರಕಾ ದೇವಾಲಯದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದು ಭದ್ರತೆಯನ್ನು ಹೆಚ್ಚಿಸಲಾಗಿದೆ.

ದ್ವಾರಕಾ ದೇವಾಲಯದ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಐಎಸ್ಐ ದಾಳಿಕೋರರನ್ನು ಕಳಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ದೇವಾಲಯದ ಬಳಿ ಭದ್ರತೆ ಕೈಗೊಳ್ಳಲಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ  ದ್ವಾರಕಾದ ಕಡಲ ತೀರದ ನಗರಗಳು ಹಾಗೂ ಮಂಡಲಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಗುಜರಾತ್ ಡಿಜಿಪಿ ತಿಳಿಸಿದ್ದಾರೆ. 12 ರಿಂದ 15 ಜನರ ಐಎಸ್ಐ ನ ಉಗ್ರರು ಗುಜರಾತ್ ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ಉಗ್ರರು ಈಗಾಗಲೇ ದ್ವಾರಕಾದಲ್ಲಿ ಬಂದಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಇದೆ ವೇಳೆ ಅಂತಾರಾಷ್ಟ್ರೀಯ ಜಲಗಡಿ ಪ್ರದೇಶದಲ್ಲಿ ಎರಡು ದೋಣಿಗಳು ಭಾರತದೊಳಗೆ ಪ್ರವೇಶ ಮಾಡಲು ಸಿದ್ಧವಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇದಕ್ಕೂ ಮುನ್ನ ಶನಿವಾರ ಗುಜರಾತ್ ನ ಭಯೋತ್ಪಾದಕ ನಿಗ್ರಹ ದಳ ಜೈಶ್-ಎ-ಮೊಹಮ್ಮದ್(ಜೆಇಎಂ) ಉಗ್ರ ಹಸನ್ ಇಮಾಮುದ್ದೀನ್ ನನ್ನ ಬಿಹಾರದ ಔರಂಗಾಬಾದ್ ನಲ್ಲಿ ಬಂಧಿಸಿತ್ತು. ಇಮಾಮುದ್ದೀನ್ ವಿಚಾರಣೆ ಮೂಲಕ ದ್ವಾರಕಾ ನಗರದ ಮೇಲೆ ದಾಳಿ ನಡೆಸುವ ಉಗ್ರರರ ಯೋಜನೆ ಬಗ್ಗೆ ಮಾಹಿತಿ ಪಡೆಯಲು ಗುಜರಾತ್ ನ ಎಟಿಎಸ್ ಅಧಿಕಾರಿಗಳು ಯತ್ನಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!