ಕೆಸಿಆರ್ ನೀಡುತ್ತಿರುವ ಚಿನ್ನಾಭರಣ 
ದೇಶ

ತೆಲಂಗಾಣ :ಹರಕೆ ಈಡೇರಿದ್ದಕ್ಕೆ ಭದ್ರಕಾಳಿ ದೇವಿಗೆ ಮುಖ್ಯಮಂತ್ರಿಯಿಂದ 3.7 ಕೋಟಿ ರೂ ಆಭರಣ

ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ ಹರಕೆ ಈಡೇರಿದ ಕಾರಣ ಸಿಎಂ ಚಂದ್ರಶೇಖರ್ ರಾವ್ ವಾರಂಗಲ್ ನ ಭದ್ರಕಾಳಿ ದೇವಿಗೆ ಚಿನ್ನಾಭರಣ.,,,

ಹೈದರಾಬಾದ್‌: ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ ಹರಕೆ ಈಡೇರಿದ ಕಾರಣ ಸಿಎಂ ಚಂದ್ರಶೇಖರ್ ರಾವ್ ವಾರಂಗಲ್ ನ ಭದ್ರಕಾಳಿ ದೇವಿಗೆ ಚಿನ್ನಾಭರಣ ಸಮರ್ಪಿಸಲಿದ್ದಾರೆ.

ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಾಳೆ ವರಂಗಲ್‌ನ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡುವ ಸಿಎಂ ಕೆಸಿಆರ್ ದೇವತೆಗೆ 11 ಕೆಜಿ 700 ಗ್ರಾಂ ತೂಕದ ಬಂಗಾರದ ಕಿರೀಟ ಸೇರಿದಂತೆ ಇನ್ನಿತರ ಆಭರಣಗಳನ್ನು ನಾಳೆ ಪತ್ನಿ ಸಮೇತ ದೇವರಿಗೆ ಸಮರ್ಪಿಸಲಿದ್ದಾರೆ.

ಜಿಆರ್‌ಟಿ ಜುವೆಲೆರ್ಸ್‌ ವಿಶೇಷವಾಗಿ ಈ ಕಿರೀಟ ತಯಾರಿಸಿದ್ದು, ಇದಕ್ಕೆ 3.7 ಕೋಟಿ ರೂ. ವ್ಯಯಿಸಲಾಗಿದೆ. ಈಗಾಗಲೇ ಸಿದ್ಧಗೊಂಡಿರುವ ಈ ಕಿರೀಟವನ್ನು ಸಂಪುಟ ಸಹೋದ್ಯೋಗಿಗಳೊಂದಿಗೆ ಸಿಎಂ ಕೆಸಿಆರ್‌ ಪರಿಶೀಲಿಸಿದ್ರು. ಸಿಎಂ ಕೆಸಿಆರ್‌ ಭದ್ರಕಾಳಿ ದೇವಿಗೆ ಸರ್ಕಾರ ವತಿಯಿಂದಲೇ ಈ ಹರಕೆ ತೀರಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುನೇತ್ರಾ ಪವಾರ್

"ನಾವು ಭಿಕ್ಷೆ ಬೇಡುತ್ತೇವೆ, ನಾಚಿಕೆಯಿಂದ ತಲೆ ಬಾಗುತ್ತೇವೆ": ಪಾಕ್ ಪ್ರಧಾನಿ

ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ: ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

Cricket: ಟಿ20 ವಿಶ್ವಕಪ್ 2026ಕ್ಕೆ ಪಾಕಿಸ್ತಾನ ಡೌಟ್? ICC ಈವೆಂಟ್ ಮುಂದೂಡಿದ ಪಿಸಿಬಿ!

Budget 2026: ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಒತ್ತು ಸಾಧ್ಯತೆ, ಕಾರ್ಪೊರೇಟ್ ವಲಯದ ನಿರೀಕ್ಷೆಗಳೇನು?

SCROLL FOR NEXT