ವಧು-ವರ-ಸುಷ್ಮಾ ಸ್ವರಾಜ್ 
ದೇಶ

ಭಾರತದ ವರನ ಜತೆ ವಿವಾಹಕ್ಕೆ ವೀಸಾ ಸಿಗದೆ ಆತಂಕಕ್ಕೀಡಾಗಿದ್ದ ಪಾಕ್ ವಧುಗೆ ಸುಷ್ಮಾ ಅಭಯ

ಭಾರತ ಯುವಕನಿಗೆ ಹಾಗೂ ಪಾಕಿಸ್ತಾನಿ ಯುವತಿ ಮದುವೆಗೆ ದಿನಗಣನೆ ಶುರುವಾಗಿದೆ. ಆದರೆ ಪಾಕಿಸ್ತಾನ-ಭಾರತ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಯುವತಿ...

ಜೋಧ್​ಪುರ: ಭಾರತ ಯುವಕನಿಗೆ ಹಾಗೂ ಪಾಕಿಸ್ತಾನಿ ಯುವತಿ ಮದುವೆಗೆ ದಿನಗಣನೆ ಶುರುವಾಗಿದೆ. ಆದರೆ ಪಾಕಿಸ್ತಾನ-ಭಾರತ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಯುವತಿ ಕಡೆಯವರಿಗೆ ವೀಸಾ ಸಿಗದೆ ಭಾರತಕ್ಕೆ ಬರಲು ನೆರವು ನೀಡಿ ಎಂದು ಕರಾಚಿ ವಧು ಮಾಡಿಕೊಂಡಿರುವ ಮನವಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸ್ಪಂದಿಸಿದ್ದು, ವೀಸಾ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. 
ಕರಾಚಿಯ ಪ್ರಿಯಾ ಬಚ್ಚಾನಿ ಹಾಗೂ ರಾಜಸ್ಥಾನದ ಜೋಧಪುರದ ನರೇಶ್ ತೇವಾನಿ ಅವರ ವಿವಾಹಕ್ಕೆ ಇನ್ನೊಂದು ತಿಂಗಳು ಬಾಕಿ ಇದ್ದು, ಕಳೆದ ಮೂರು ತಿಂಗಳ ಹಿಂದೆ ಪ್ರಿಯಾ ಕುಟುಂಬಸ್ಥರು ವೀಸಾಗಾಗಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರದ ಕಾರಣ ಆತಂಕಕ್ಕೀಡಾಗಿದ್ದ ಪ್ರಿಯಾ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟರ್ ನಲ್ಲಿ ತಮ್ಮ ಸಮಸ್ಯೆಯನ್ನು ವಿವರಿಸಿದ್ದರು. 
ಪ್ರಿಯಾರ ಮನವಿಗೆ ಕೂಡಲೇ ಸ್ಪಂಧಿಸಿದ ಸುಷ್ಮಾ ಸ್ವರಾಜ್ ಆತಂಕ ಪಡುವ ಅಗತ್ಯವಿಲ್ಲ. ನಿಮಗೆ ಶೀಘ್ರ ವೀಸಾ ವಿತರಿಸಲಾಗುವುದು ಎಂದು ಉತ್ತರ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!