ಭಾರತ-ಚೀನಾ (ಸಂಗ್ರಹ ಚಿತ್ರ) 
ದೇಶ

ಮಸೂದ್ ನಿಷೇಧಕ್ಕೆ ತಡೆ: ಭಾರತ, ಪಾಕ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಚೀನಾಗೆ ಬಿಜೆಪಿ

ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಅಜರ್ ನಿಷೇಧಕ್ಕೆ ಪ್ರತೀ ಬಾರಿ ತಡೆಯೊಡ್ಡುತ್ತಿರುವ ಚೀನಾ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಭಾರತ ಇಲ್ಲವೇ ಪಾಕಿಸ್ತಾನ ಎರಡು ದೇಶಗಳಲ್ಲಿ ಒಂದನ್ನು ದೇಶವನ್ನು...

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಅಜರ್ ನಿಷೇಧಕ್ಕೆ ಪ್ರತೀ ಬಾರಿ ತಡೆಯೊಡ್ಡುತ್ತಿರುವ ಚೀನಾ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಭಾರತ ಇಲ್ಲವೇ ಪಾಕಿಸ್ತಾನ ಎರಡು ದೇಶಗಳಲ್ಲಿ ಒಂದನ್ನು ದೇಶವನ್ನು ಚೀನಾ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ನಿಷೇಧ ಕುರಿತಂತೆ ಪ್ರತೀ ಬಾರಿ ಚರ್ಚೆಯಾದಾಗಲೂ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು, ತನ್ನ ನಡೆಯನ್ನು ನಿನ್ನೆಯಷ್ಟೇ ಸಮರ್ಥಿಸಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು, ಭಯೋತ್ಪಾದನೆ ಹಾಗೂ ದ್ವಿಪಕ್ಷೀಯ ಸಂಬಂಧ ಒಂದೆಡೆ ಹೋಗಲು ಸಾಧ್ಯವಿಲ್ಲ. ಚೀನಾ ಭಾರತ ಇಲ್ಲವೇ ಪಾಕಿಸ್ತಾನ ಎರಡರಲ್ಲಿ ಒಂದನ್ನು ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಮಧ್ಯಮದವರೆಂಬ ಯಾವುದೇ ದಾರಿಯಿಲ್ಲ. ಚೀನಾ ಯಾವುದಾದರೂ ಒಂದು ನಿಲುವನ್ನು ಸ್ಪಷ್ಟಪಡಿಸಬೇಕಿದೆ. ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಚೀನಾ ಪಾಕಿಸ್ತಾನದ ಪರವಾಗಿ ವರ್ತಿಸುತ್ತಿದೆ. ಮೊದಲೂ ಚೀನಾ ಭಯೋತ್ಪಾದನೆ ಕುರಿತಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಈ ರೀತಿಯ ದ್ವಂದ್ವ ನಿಲುವಿನಿಂದ ಇಂಡೋ-ಚೀನಾದ ಸಂಬಂಧವನ್ನು ಎಷ್ಟು ದಿನಗಳ ಕಾಲ ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.

ನಿನ್ನಯಷ್ಟೇ ಮಸೂದ್ ಅಜರ್ ಗೆ ನೀಡುತ್ತಿರುವ ಬೆಂಬಲವನ್ನು ಸಮರ್ಥಿಸಿಕೊಂಡಿರುವ ಚೀನಾ, ಮಸೂದ್ ವಿಚಾರ ಕುರಿತಂತೆ ಭಾರತದ ಸಲ್ಲಿಸಿರುವ ಮನವಿಯಲ್ಲಿ ಗೊಂದಲಗಳಿರುವುದರಿಂದ ತಾಂತ್ರಿಕವಾಗಿ ತಡೆ ನೀಡುವ ಮೂಲಕ ಗೊಂದಲ ಬಗೆಹರಿಸಲು ಕಾಲಾವಕಾಶವನ್ನು ಮಾಡಿಕೊಡಲಾಗಿದೆ ಎಂದು ಹೇಳಿತ್ತು. ವಿಶ್ವಸಂಸ್ಥೆಯಲ್ಲಿ ಚೀನಾ ಹೊರತುಪಡಿಸಿದರೆ ಭದ್ರತಾ ಸಮಿತಿಯ 14 ದೇಶಗಳು ಈಗಾಗಲೇ ಭಾರತದ ಮನವಿಗೆ ಸಮ್ಮತಿ ಸೂಚಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್