ದೇಶ

ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಿ

Sumana Upadhyaya
ನವದೆಹಲಿ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತತ್ವಗಳಿಗೆ ಸಂಬಂಧಪಟ್ಟ ಸರಣಿ ಪುಸ್ತಕಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದರು.
15 ಸಂಪುಟಗಳ ಈ ಹೊತ್ತಿಗೆಯು ಉಪಾಧ್ಯಾಯ ಅವರ ಜೀವನದ ಪ್ರಮುಖ ಘಟನೆಗಳು, ಜನಸಂಘದ ಪ್ರಯಾಣ,1965ರ ಭಾರತ-ಪಾಕಿಸ್ತಾನ ಯುದ್ಧ, ತಾಷ್ಕೆಂಟ್ ಒಪ್ಪಂದ ಮತ್ತು ಗೋವಾದ ವಿಮೋಚನೆ ಮೊದಲಾದ ವಿಷಯಗಳನ್ನು ಒಳಗೊಂಡಿದೆ.
1967ರಲ್ಲಿ ಉಪಾಧ್ಯಾಯ ಅವರು ಜನಸಂಘದ ಮುಖ್ಯಸ್ಥರಾದ ನಂತರ ಅವರನ್ನು ಹತ್ಯೆಗೈದವರೆಗಿನ ಸಂಗತಿಗಳನ್ನು ಸಂಪುಟ ಒಳಗೊಂಡಿದೆ.
ಅವಿಭಾಜ್ಯ ಮಾನವತಾವಾದದ ಸಂಶೋಧನೆ ಮತ್ತು ಅಭಿವೃದ್ಧಿ ಫೌಂಡೇಶನ್ ಮತ್ತು ಪ್ರಭಾತ್ ಪಬ್ಲಿಕೇಶನ್ ಪುಸ್ತಕವನ್ನು ಹೊರತಂದಿದೆ.
SCROLL FOR NEXT