ದೇಶ

ಆಯ್ದ ಮಾರ್ಗಗಳಲ್ಲಿ ಭಾರತೀಯ ರೈಲ್ವೆಯಿಂದ ಗಾಜಿನ ಛಾವಣಿಯ ಬೋಗಿ ಅಳವಡಿಕೆ

Sumana Upadhyaya
ನವದೆಹಲಿ: ಪ್ರಯಾಣಿಕರ ಮತ್ತು ಎಕ್ಸ್ ಪ್ರೆಸ್ ರೈಲಿನ ಹಳೆಯ ಶೈಲಿಯನ್ನು ಬದಲಾಯಿಸಿ ಆಧುನಿಕತೆ ನೀಡಲು ಭಾರತೀಯ ರೈಲ್ವೆಯ ಆಯ್ದ ರೈಲುಗಳ ಬೋಗಿಗಳಿಗೆ ಗಾಜಿನ ಛಾವಣಿ ಮತ್ತು ಟಿವಿ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ) ಹೇಳಿದೆ.
ಬೋಗಿಗಳ ಮೇಲ್ಚಾವಣಿಗೆ ಗಾಜಿನ ಸೀಲಿಂಗ್ ವ್ಯವಸ್ಥೆಯನ್ನು ಐಆರ್ ಸಿಟಿಸಿ ಮತ್ತು ಸಂಶೋಧನೆ ವಿನ್ಯಾಸ ಮತ್ತು ಗುಣಮಟ್ಟದ ಸಂಸ್ಥೆ ಹಾಗೂ ಚೆನ್ನೈಯ ಪೆರಂಬದೂರಿನ ಆಂತರಿಕ ಕೋಚ್ ಫ್ಯಾಕ್ಟರಿ ಒಟ್ಟಾಗಿ ವಿನ್ಯಾಸಗೊಳಿಸಿದ್ದು, ಆಯ್ದ ರೈಲುಗಳಲ್ಲಿ ಡಿಸೆಂಬರ್ ನಿಂದ ಜಾರಿಗೆ ಬರಲಿದೆ.
''ಡಿಸೆಂಬರ್ ನಿಂದ ಮೂರು ಅಂತಹ ಕೋಚ್ ಗಳು ಪ್ರಾರಂಭವಾಗಲಿದೆ. ಮೊದಲ ಕೋಚ್ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಎರಡು ಕೋಚ್ ಗಳು ಆಗ್ನೇಯ ರೈಲಿನ ಅರಕು ವ್ಯಾಲಿಯಲ್ಲಿ ಅಳವಡಿಸಲಾಗುತ್ತದೆ. ಇದಕ್ಕೆ ಸುಮಾರು 4 ಕೋಟಿ ರೂಪಾಯಿ ವೆಚ್ಚ ತಗುಲಲಿದೆ'' ಎಂದು ಐಆರ್ ಸಿಟಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಮನೋಚ ತಿಳಿಸಿದ್ದಾರೆ.
ಭಾರತೀಯ ಪ್ರವಾಸೋದ್ಯಮವನ್ನು ಬಲಪಡಿಸಲು ವಿದೇಶಿಗರನ್ನು ಆಕರ್ಷಿಸಲು ಈ ವ್ಯವಸ್ಥೆ ಅಳವಡಿಸಲಾಗುತ್ತದೆ. ಸ್ವಿಡ್ಜರ್ಲೆಂಡ್ ನಂತಹ ವಿದೇಶಗಳಲ್ಲಿ ರೈಲುಗಳಲ್ಲಿ ಗಾಜು ಛಾವಣಿ ವ್ಯವಸ್ಥೆಯಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ರೈಲು ಪ್ರವಾಸೋದ್ಯಮವನ್ನು ಇದು ಬಲಪಡಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಮನೋಚಾ. 
ಯೋಜನೆಯ ಬಗ್ಗೆ ವಿವರಣೆ ನೀಡಿದ ಐಆರ್ ಸಿಟಿಸಿಯ ಸಮೂಹ ಪ್ರಧಾನ ವ್ಯವಸ್ಥಾಪಕ ಧಮ್ ಗಾಜ್ ಪ್ರಸಾದ್, ಗಾಜು ಛಾವಣಿ ರೈಲುಗಳಲ್ಲಿ ಅಳವಡಿಸುವುದು ಭಾರತದಲ್ಲಿ ಮೊದಲಾಗಿದ್ದು ವಿಶ್ವ ದರ್ಜೆಯ ಗುಣಮಟ್ಟವನ್ನು ಹೊಂದಿರುತ್ತದೆ ಎಂದರು.
ಈ ಸಂಬಂಧ ಕೆಲಸ ಕಾರ್ಯಗಳು 2015ರಲ್ಲಿ ಆರಂಭವಾಗಿದೆ. ಈ ವ್ಯವಸ್ಥೆ ಅಳವಡಿಸಿದ ಕೋಚ್ ನ ರೈಲು ಈ ತಿಂಗಳಲ್ಲಿ ಸಂಚರಿಸಲಿದೆ. ಬೋಗಿಯಲ್ಲಿ ತಿರುಗುವ ಕುರ್ಚಿ ಇರುತ್ತದೆ. ಅದರಲ್ಲಿ ಕುಳಿತು ಪ್ರಯಾಣಿಕರು ಭಾಗಶಃ ಗಾಜಿನ ಚಾವಣಿಯ ಮೂಲಕ ವೈಮಾನಿಕ ನೋಟವನ್ನು ಸವಿಯಬಹುದು.ಅಲ್ಲದೆ ಪ್ರವಾಸಿಗರ ಆಕರ್ಷಣೆಗೆ ಮತ್ತು ಸೌಕರ್ಯಕ್ಕೆ ಕಾಲಿಡಲು ಸಾಕಷ್ಟು ಜಾಗ, ಆಧುನಿಕ ಟಿವಿ ವ್ಯವಸ್ಥೆ ಕೂಡ ಇರುತ್ತದೆ ಎಂದು ಹೇಳಿದರು.
SCROLL FOR NEXT