ದೇಶ

ಕೇರಳ: ಕಣ್ಣೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ

Shilpa D

ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಆಡಳಿತಾರೂಢ ಸಿಪಿಎಂ ಪಕ್ಷದ ಕಾರ್ಯಕರ್ತನ ಕೊಲೆ ನಡೆದ ಎರಡು ದಿನಗಳ ನಂತರ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಸೇಡಿಗಾಗಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ,

ಕಾರ್ಯಕರ್ತನ ಕೊಲೆಯಲ್ಲಿ ಸಿಪಿಎಂ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸೋಮವಾರ 52 ವರ್ಷದ ಸಿಪಿಎಂ ಕಾರ್ಯಕರ್ತ ಮೋಹನನ್ ಎಂಬಾತನನ್ನು ಜನಜಂಗುಳಿಯಿದ್ದ ಮಾರುಕಟ್ಟೆಯ ಆತನ ಸಾರಾಯಿ ಅಂಗಡಿಯಲ್ಲೇ ಐವರು ದುಶ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.

ಕೊಲೆ ಮಾಡಲು ಬಂದಿದ್ದ ಆವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೊಲೆಯ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿತ್ತು. ಕೊಲೆ ಹಿನ್ನೆಲೆಯಲ್ಲಿ ನಾಳೆ ಕಣ್ಣೂರ್ ಬಂದ್ ಗೆ ಸಿಪಿಎಂ ಕರೆ ನೀಡಿದೆ.

ಕಳೆದ ಮೇನಲ್ಲಿ ಎಡಪಕ್ಷ ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ಹಿಂಸಾಚಾರ ಹೆಚ್ಚಿದ್ದು ಸುಮಾರು 300 ರಾಜಕೀಯ ಸಂಬಂಧಿತ ಹಿಂಸಾಚಾರ ನಡೆದಿವೆ ಎಂದು ಹೇಳಲಾಗಿದೆ.

SCROLL FOR NEXT