ಸಾಂದರ್ಭಿಕ ಚಿತ್ರ 
ದೇಶ

52 ಮಂದಿಗೆ ಕಚ್ಚಿದ ಬ್ಲ್ಯಾಕ್ ಕೋಬ್ರಾ: 3 ಜನರ ಸಾವು

ಉತ್ತರ ಪ್ರದೇಶದ ಪರಮ್ ಗ್ರಾಮದಲ್ಲಿ ವಿಷಸರ್ಪಗಳ ಕಾಟ ಹೆಚ್ಚಾಗಿದ್ದು, ಬ್ಲ್ಯಾಕ್ ಕೋಬ್ರಾವೊಂದು 52 ಮಂದಿಗೆ ಕಚ್ಚಿದ ಪರಿಣಾಮ ಮೂರು ಜನರು ಸಾವನ್ನಪ್ಪಿರುವ ಘಟನೆ...

ರಾಂಪುರ: ಉತ್ತರ ಪ್ರದೇಶದ ಪರಮ್ ಗ್ರಾಮದಲ್ಲಿ ವಿಷಸರ್ಪಗಳ ಕಾಟ ಹೆಚ್ಚಾಗಿದ್ದು, ಬ್ಲ್ಯಾಕ್ ಕೋಬ್ರಾವೊಂದು 52 ಮಂದಿಗೆ ಕಚ್ಚಿದ ಪರಿಣಾಮ ಮೂರು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನನ್ನ ಪತಿ ನೀರು ತರಲೆಂದು ಹೋಗಿದ್ದರು. ಈ ವೇಳೆ ಹಾವು ಕಚ್ಚಿತ್ತು. ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ವಿಷ ದೇಹ ಪೂರ್ತಿ ಆವರಿಸಿದ್ದರಿಂದ ನನ್ನ ಪತಿ ಮೃತಪಟ್ಟಿದ್ದರು. ಹಾವುಗಳ ಭಯದಿಂದ ಇದೀಗ ನನ್ನ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಸರ್ಕಾರದಿಂದಲೂ ನಮಗೆ ಯಾವುದೇ ಸಹಾಯವಾಗಿಲ್ಲ ಎಂದು ಮೃತ ವ್ಯಕ್ತಿಯ ಪತ್ನಿಯೊಬ್ಬರು ಹೇಳಿಕೊಂಡಿದ್ದಾರೆ.

ರಸ್ತೆಗಳಲ್ಲಿ ಬಹಿರಂಗವಾಗಿಯೇ ವಿಷಸರ್ಪಗಳು ಓಡಾಡುತ್ತಿರುತ್ತವೆ. ಇದರಿಂದಾಗಿ ಗ್ರಾಮದ ಜನರು ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆಂದು ಸ್ಥಳೀಯ ಮೊಹಮ್ಮದ್ ನಬಿ ಅವರು ಹೇಳಿದ್ದಾರೆ.

ನನ್ನ ಮಗಳು ಆಟವಾಡಿ ಮನೆಗೆ ಬಂದು ಮಲಗಿದ್ದಳು. ಈ ವೇಳೆ ಹಾವು ಕಚ್ಚಿತ್ತು. ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಮಗಳು ಸಾವನ್ನಪ್ಪಿದ್ದಳು ಎಂದು ಮೃತಪಟ್ಟ ಸಂಧ್ಯಾ ಎಂಬ ಯುವತಿಯ ತಾಯಿ ಹೇಳಿಕೊಂಡಿದ್ದಾರೆ.

ಇನ್ನು ಹಾವುಗಳ ಕಾಟ ಕುರಿತಂತೆ ಮಾತನಾಡಿರುವ ಜಿಲ್ಲಾಧಿಕಾರಿ ಅಮಿತ್ ಕಿಶೋರ್ ಅವರು, ಉತ್ತರಖಾಂಡದ ಕಾಶಿಪುರದಲ್ಲಿಂದ ಹಾವುಗಾರರನ್ನು ಕರೆತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ