ಮೊದಲು ಸೊಳ್ಳೆ ಸಾಯಿಸಿ ನಂತರ ಸೀಮಿತ ದಾಳಿ ಸಾಕ್ಷ್ಯಾಧಾರ ಕೇಳಿ: ಕೇಜ್ರಿವಾಲ್ ವಿರುದ್ಧ ಪೋಸ್ಟರ್ 
ದೇಶ

ಮೊದಲು ಸೊಳ್ಳೆ ಸಾಯಿಸಿ ನಂತರ ಸೀಮಿತ ದಾಳಿ ಸಾಕ್ಷ್ಯಾಧಾರ ಕೇಳಿ: ಕೇಜ್ರಿವಾಲ್ ವಿರುದ್ಧ ಪೋಸ್ಟರ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ...

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಕೇಜ್ರಿವಾಲ್ ವಿರುದ್ಧ ದೆಹಲಿಯಲ್ಲಿ ಕೆಲ ಪೋಸ್ಟರ್ ಗಳು ರಾರಾಜಿಸುತ್ತಿವೆ.

ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳಿದ್ದ ಕೇಜ್ರಿವಾಲ್ ಅವರನ್ನು ರಾಜಧಾನಿ ದೆಹಲಿಯಲ್ಲಿ ಬಿಜೆಪಿಯ ಯುವ ಮೋರ್ಚಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಲೇವಡಿ ಮಾಡುವ ಕೆಲ ಪೋಸ್ಟರ್ ಗಳನ್ನು ಬಿಜೆಪಿಯ ಪ್ರಧಾನ ಕಾರ್ಯಾಲಯದ ಮುಂದೆ ಪ್ರದರ್ಶಿಸಿದೆ. ಮೊದಲು ಸೊಳ್ಳೆಗಳನ್ನು ಸಾಯಿಸಿ ನಂತರ ಸೀಮಿತ ದಾಳಿ ಕುರಿತ ಸಾಕ್ಷ್ಯಾಧಾರ ಕೇಳಿ ಎಂದು ಲೇವಡಿ ಮಾಡಲಾಗಿದೆ.

ಡೆಂಗಿ ಮತ್ತು ಚಿಕುನ್ ಗುನ್ಯಾ ರೋಗಗಳನ್ನು ನಿಯಂತ್ರಿಸುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದ್ದು, ಇದನ್ನು ಅಣಕಿಸುವ ರೀತಿಯಲ್ಲಿ ದೊಡ್ಡ ಪೋಸ್ಟರ್ ವೊಂದನ್ನು ಪ್ರದರ್ಶಿಸಲಾಗುತ್ತಿದೆ. ಪೋಸ್ಟರ್ ನಲ್ಲಿ 'ಕುಚ್ಚ್ ಕರ್ಕೆ ತೋ ದಿಖಾವೋ'! ಡಿಯರ್ ಕೇಜ್ರಿವಾಲ್, ಮಚ್ಚರ್ ಸ್ಟ್ರೈಕ್ ಹೀ ಕರ್ಕೆ ದಿಖಾವೋ, ಆರೋಪ್ ಲಗಾನಾ ಛೋಡ್ಕರ್ ಕಾಮ್ ಕರೇ ದಿಲ್ಲಿ ಸರ್ಕಾರಿ: ಸುಪ್ರೀಕೋರ್ಟ್.

ಏನಾದರೂ ಮಾಡಿ ತೋರಿಸಿ. ಡಿಯರ್ ಕೇಜ್ರಿವಾಲ್, ಸೊಳ್ಳೆಗಳ ಮೇಲೆ ದಾಳಿ ಮಾಡಿ ತೋರಿಸಿ. ಆರೋಪ ಮಾಡುವುದನ್ನು ಬಿಟ್ಟು ಕೆಲಸ ಮಾಡು ದೆಹಲಿ ಸರ್ಕಾರ: ಸುಪ್ರೀಂಕೋರ್ಟ್. ಎಂಬ ರೀತಿಯ ರೀತಿಯ ಪೋಸ್ಟರ್ ಗಳನ್ನು ಪ್ರದರ್ಶಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ