ದೇಶ

ಯೋಧರಿಗೆ ಮೋದಿ ಸರ್ಕಾರದಿಂದ ದೀಪಾವಳಿ ಗಿಫ್ಟ್: ಶೇಕಡಾ 10ರಷ್ಟು ಬಾಕಿ ವೇತನ ಪಾವತಿ

Sumana Upadhyaya
ನವದೆಹಲಿ:ಸೈನಿಕರ ಮುಖದಲ್ಲಿ ನಗು ತರಿಸಿರುವ ಕೇಂದ್ರ ಸರ್ಕಾರ  ದೀಪಾವಳಿಗೆ ಶೇಕಡಾ 10ರಷ್ಟು ಬಾಕಿ ವೇತನ ಬಿಡುಗಡೆ ಮಾಡಲು ನಿರ್ಧರಿಸಿದೆ. 
ಇಂಗ್ಲಿಷ್ ದೈನಿಕವೊಂದರ ಪ್ರಕಾರ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಅಕ್ಟೋಬರ್ 30ರೊಳಗೆ ಮಧ್ಯ ಭಾಗದಲ್ಲಿ ಯೋಧರು ಬಾಕಿ ವೇತನ ಪಡೆಯಲಿದ್ದಾರೆ.
ಈ ಕುರಿತು ರಕ್ಷಣಾ ಸಚಿವಾಲಯ ಮೊನ್ನೆ 10ನೇ ತಾರೀಖಿನಂದು ಹೊರಡಿಸಿದ ಆದೇಶದ ಪ್ರತಿ ಸಿಕ್ಕಿದೆ. 7ನೇ ವೇತನ ಆಯೋಗದ ಅಧಿಸೂಚನೆಯಂತೆ ಬಾಕಿ ನೀಡಿಕೆಯಂತೆ ತಾತ್ಕಾಲಿಕ ಆಧಾರದ ಮೇಲೆ ಬಾಕಿ ವೇತನ ನೀಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಯೋಧರು ಈಗ ಪಡೆಯುತ್ತಿರುವ ವೇತನದ ಶೇಕಡಾ 10ರಷ್ಟು ಹೆಚ್ಚು ಪಡೆಯಲಿದ್ದಾರೆ. ಇದು ಈ ವರ್ಷ ಜನವರಿಯಿಂದ ಪೂರ್ವಾನ್ವಯವಾಗಲಿದೆ. 
SCROLL FOR NEXT