ದೇಶ

ಜಾಗತಿಕ ಆರ್ಥಿಕತೆಗೆ ಬಲ ನೀಡುವ ಸಾಮರ್ಥ್ಯ ಭಾರತಕ್ಕಿದೆ: ಮೋದಿ

Srinivas Rao BV

ಲೂಧಿಯಾನ: ನಿಧಾನವಾಗಿ ಕುಸಿಯುತ್ತಿರುವ ಜಾಗತಿಕ ಆರ್ಥಿಕತೆಗೆ ಬಲ ನೀಡಲು ಪ್ರಮುಖ ಪಾತ್ರ ವಹಿಸುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಣ್ಣ ಉದ್ದಿಮೆಗಳು ಶೂನ್ಯ ನ್ಯೂನತೆ ಹಾಗೂ ಪರಿಸರದ ಮೇಲೆ ಶೂನ್ಯ ಪರಿಣಾಮ ಬೀರುವಂತಹ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಕರೆ ನೀಡಿದ್ದು ಖಾದಿ ಕೈಗಾರಿಕೆಗಳನ್ನು ಉತ್ತೇಜಿಸಬೇಕೆಂದು ಹೇಳಿದ್ದಾರೆ. ಖಾದಿ ಹಿಂದೊಮ್ಮೆ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ಬಳಕೆಯಾಗಿತ್ತು.
ಆದರೆ ಈಗ ಅದನ್ನು ಫ್ಯಾಷನ್ ಗಾಗಿ ಬಳಸಬೇಕಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಕಾಲಕ್ರಮೇಣ ಎಲ್ಲವು ಬದಲಾಗಿದ್ದು, ಹಿಂದೊಮ್ಮೆ ಖಾದಿ ಫಾರ್ ನೇಷನ್ ಎಂಬ ಘೋಷಣೆ ಈಗ ಖಾದಿ ಫಾರ್ ಫ್ಯಾಷನ್ ಆಗಿ ಬದಲಾಗಿದೆ ಎಂದು ಹೇಳಿದ್ದಾರೆ. ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದ್ದು ವಿಶ್ವದ ಆರ್ಥಿಕತೆಗೆ ಬಲ ತುಂಬುತ್ತಿದೆ ಎಂದು ಮೋದಿ ಹೇಳಿದ್ದಾರೆ.

SCROLL FOR NEXT