ದೇಶ

ಇಂಫಾಲ್ ನಲ್ಲಿ ತಮ್ಮ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದ ಇರೋಮ್ ಶರ್ಮಿಳಾ

Lingaraj Badiger
ಗುವಾಹತಿ: ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು(ಎಎಫ್‌ಎಸ್‌ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ ಸುಧೀರ್ಘ 16 ವರ್ಷಗಳ ಕಾಲ ಉಪವಾಸ ನಡೆಸಿದ್ದ ಇರೋಮ್ ಶರ್ಮಿಳಾ ಅವರು ಮಂಗಳವಾರ ಇಂಫಾಲ್ ನಲ್ಲಿ ತಮ್ಮ ರಾಜಕೀಯ ಪಕ್ಷಕ್ಕೆ ಚಾಲನೆ ನೀಡರುವ ಮೂಲಕ ಅಧಿಕೃತವಾಗಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ್ದಾರೆ.
ಮಣಿಪುರ ರಾಜಧಾನಿ ಇಂಫಾಲ್ ನಲ್ಲಿ ಇಂದು ಇರೋಮ್ ಶರ್ಮಿಳಾ ಅವರು ತಮ್ಮ ನೂತನ ಪಕ್ಷ ಜನತಾ ಪುನರುಜ್ಜೀವನ ಮತ್ತು ನ್ಯಾಯ ಮೈತ್ರಿಕೂಟ(ಪಿಆರ್ ಜೆಎ)ಗೆ ಚಾಲನೆ ನೀಡಿದರು. ಎರೆಂಡ್ರೊ ಲಿಚೊನ್ ಬಾಮ್ ಅವರು ಈ ಪಕ್ಷದ ಸಂಚಾಲಕರಾಗಿದ್ದು, ಇರೋಮ್ ಶರ್ಮಿಳಾ ಅವರು ಸಹ ಸಂಚಾಲಕಿಯಾಗಿದ್ದಾರೆ.
ಮುಂದಿನ ವರ್ಷ ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು, ಶರ್ಮಿಳಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ.
16 ವರ್ಷಗಳ ನಂತರ ಕಳೆದ ಆಗಸ್ಟ್ ೯ರಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಶರ್ಮಿಳಾ, ತಾವು ರಾಜಕೀಯಕ್ಕೆ ಪ್ರವೇಸಿಸಲು ಅಪೇಕ್ಷಿಸಿರುವುದಾಗಿ ತಿಳಿಸಿದ್ದರು.
SCROLL FOR NEXT