ದೇಶ

ಶಾಸಕರನ್ನು ಬಿಟ್ಟಾಕಿ, 50ಲಕ್ಷಕ್ಕೆ ಒಬ್ಬ ಕಾರ್ಪೋರೇಟರ್ ಬರಲ್ಲ: ಅಜಿತ್ ಪವಾರ್ ವಿವಾದಾತ್ಮಕ ಹೇಳಿಕೆ

Lingaraj Badiger
ಮುಂಬೈ: ಶಾಸಕರನ್ನು ಬಿಟ್ಟಾಕಿ, ಈಗ 50 ಲಕ್ಷ ರುಪಾಯಿಗೆ ಒಬ್ಬ ಕಾರ್ಪೋರೇಟರ್ ಸಹ ಬರಲ್ಲ ಎಂದು ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ ಎನ್ ಸಿಪಿ ನಾಯಕ, ಹಿಂದೆ 50 ಲಕ್ಷ ರುಪಾಯಿ ಕೊಟ್ಟರೆ ಶಾಸಕರು ನಿಷ್ಠೇ ಬದಲಾಯಿಸುತ್ತಿದ್ದರು. ಆದರೆ ಈಗ 50ಲಕ್ಷಕ್ಕೆ ಒಬ್ಬ ಕಾರ್ಪೋರೇಟರ್ ಸಹ ಒಪ್ಪಲ್ಲ ಎಂದು ಶಾಸಕರ ಕುದುರೆ ವ್ಯಾಪಾರವನ್ನು ಒಪ್ಪಿಕೊಂಡಿದ್ದಾರೆ.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಅವರ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಕುದುರೆ ವ್ಯಾಪಾರ ಮತ್ತು ಶಾಸಕರ ಪಕ್ಷಾಂತರ ಭೀತಿಯಿಂದ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಶಾಸಕರು ಕೇವಲ 50 ಲಕ್ಷ ರುಪಾಯಿಗೆ ಪಕ್ಷಾಂತರಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ ಆ ಮೊತ್ತಕ್ಕೆ ಒಬ್ಬ ಕಾರ್ಪೋರೇಟರ್ ಸಹ ಪಕ್ಷಾಂತರ ಮಾಡಲ್ಲ ಎಂದು ಪವಾರ್ ಹೇಳಿದ್ದಾರೆ.
ನಿಷ್ಠೆ ಬದಲಾಯಿಸಿ ಮತ್ತೊಂದು ಪಕ್ಷಕ್ಕೆ ಹೋಗುವ ನಾಯಕರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬೇಡಿ ಎಂದು ಸಹ ಅಜಿತ್ ಪವಾರ್ ಈ ವೇಳೆ ಕರೆ ನೀಡಿದ್ದಾರೆ.
SCROLL FOR NEXT