ಸಾಂದರ್ಭಿಕ ಚಿತ್ರ 
ದೇಶ

ಎಂಬ್ರೇಯರ್ ಯುದ್ಧ ವಿಮಾನ ಒಪ್ಪಂದ: ರಕ್ಷಣಾ ಸಲಹೆಗಾರ ವಿಪಿನ್ ಖನ್ನಾ ವಿರುದ್ಧ ಎಫ್ ಐಆರ್ ದಾಖಲು

ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ತನಿಖಾ ದಳ 208 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ...

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ತನಿಖಾ ದಳ 208 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಎಂಬ್ರೇಯರ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಫ್ ಐಆರ್ ದಾಖಲಿಸಿದೆ. ಅಲ್ಲದೆ ತನಿಖಾ ಸಂಸ್ಥೆ,  ರಕ್ಷಣಾ ಸಲಹೆಗಾರ ಅನಿವಾಸಿ ಭಾರತೀಯ ವಿಪಿನ್ ಖನ್ನಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರು ಸೂಚಿಸಿದೆ.ಇಂಗ್ಲಿಷ್ ದೈನಿಕವೊಂದಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ, ಸಿಂಗಾಪೂರ್ ಮೂಲದ ಕಂಪೆನಿಯಾದ ಇಂಟರ್ ದೇವ್ ಪ್ರೈಲಿ ನಿಂದ ಖನ್ನಾ ಅವರಿಗೆ ಭಾರೀ ಮೊತ್ತ ಸಂದಾಯವಾಗಿದೆ ಎಂದು ಹೇಳಲಾಗುತ್ತಿದೆ.
ಸ್ವಿಟ್ಜರ್ಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಮೂಲಕ ಹಣ  ಸಂದಾಯವಾಗಿದೆ. 2000ದಿಂದ ಸಾಫ್ಟ್ ವೇರ್ ಕಂಪೆನಿಯಾಗಿ ಇಂಟರ್ ದೇವ್ ಪ್ರೈ.ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರಕ್ಷಣಾ ಇಲಾಖೆಗೆ 3 ಯುದ್ಧ ವಿಮಾನ ಎಂಬ್ರಿಯರ್-145 ಕಳುಹಿಸಲು ಲಂಚ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಒಪ್ಪಂದದ ದಾಖಲೆ, ಷರತ್ತು ಪತ್ರಗಳನ್ನು ಸಿಬಿಐ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
2008ರಲ್ಲಿ  ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಒಪ್ಪಂದ ನಡೆದಿತ್ತು ಎಂದು ಹೇಳಲಾಗುತ್ತಿದೆ. ಒಪ್ಪಂದದಲ್ಲಿ ಎಂಬ್ರಿಯರ್ ಮತ್ತು ಡಿಆರ್ ಡಿಒ ಮಧ್ಯೆ ಮೂರು ಯುದ್ಧ ವಿಮಾನ ಸಾಮಗ್ರಿ, ಸ್ವದೇಶಿ ರಾಡಾರ್ ಗಳ ಖರೀದಿಗೆ ಸಹಿ ಹಾಕಲಾಗಿತ್ತು. 208 ದಶಲಕ್ಷ ಡಾಲರ್ ಮೊತ್ತದ ಎಂಬ್ರಿಯರ್ ಯುದ್ಧ ವಿಮಾನ ಒಪ್ಪಂದದಲ್ಲಿ ಏನಾದರೂ ಮೋಸ ಪತ್ತೆಯಾದಲ್ಲಿ ಸಿಬಿಐ ತನಿಖೆ ನಡೆಸಬಹುದು ಎಂಬ ಸುಳಿವನ್ನು ಕಳೆದ ತಿಂಗಳು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೀಡಿದ್ದರು.
ಬ್ರೆಝಿಲ್ ನ ವಿಮಾನಯಾನ ಸಂಸ್ಥೆ ಎಂಬ್ರಿಯರ್ ಜೊತೆ ಒಪ್ಪಂದಕ್ಕೆ ಸಂಬಂಧಪಟ್ಟ ಭ್ರಷ್ಟಾಚಾರ ತನಿಖೆ ಹೊರಬಿದ್ದಿತ್ತು. ಈ ಒಪ್ಪಂದದ ಏಜೆಂಟ್ ಆಗಿ ಖನ್ನಾ ಅವರಿದ್ದು ಅವರು ಡಾಲರ್ 5.76 ದಶಲಕ್ಷ ಕಮಿಷನ್ ನ್ನು ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!