ಸಂಗ್ರಹ ಚಿತ್ರ 
ದೇಶ

ದೆಹಲಿ ಟು ಸ್ಯಾನ್ ಫ್ರಾನ್ಸಿಸ್ಕೋ "ನಾನ್ ಸ್ಟಾಪ್" ಪ್ರಯಾಣ; ದಾಖಲೆ ಬರೆದ ಏರ್ ಇಂಡಿಯಾ

ಭಾರತ ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ ಕೋ ಗೆ ನಿಲುಗಡೆ ರಹಿತ ಪ್ರಯಾಣ ಮಾಡುವ ಮೂಲಕ ದಾಖಲೆ ಬರೆದಿದೆ.

ನವದೆಹಲಿ: ಭಾರತ ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ ಕೋ ಗೆ ನಿಲುಗಡೆ ರಹಿತ ಪ್ರಯಾಣ  ಮಾಡುವ ಮೂಲಕ ದಾಖಲೆ ಬರೆದಿದೆ.

ದೆಹಲಿಯಿಂದ-ಸ್ಯಾನ್ ಫ್ರಾನ್ಸಿಸ್ಕೋ ನಡುವಿನ ಸುಮಾರು 15,300 ಕಿ.ಮೀ. ದೂರವನ್ನು ಯಾವುದೇ ನಿಲುಗಡೆ ಇಲ್ಲದೇ ಕೇವಲ 14.5 ಗಂಟೆಯಲ್ಲಿ ಪ್ರಯಾಣಿಸುವ ಮೂಲಕ ಏರ್ ಇಂಡಿಯಾ  ವಿಮಾನಯಾನ ಸಂಸ್ಥೆ ಹೊಸ ದಾಖಲೆ ಬರೆದಿದೆ. ಆ ಮೂಲಕ ಈ ಹಿಂದೆ ಎಮಿರೇಟ್ಸ್ ಸಂಸ್ಥೆಯ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಏರ್ ಇಂಡಿಯಾ ತನ್ನ ಹೆಸರಿಗೆ ಬರೆಸಿಕೊಂಡಿದೆ.

ಈ ಹಿಂದೆ ಎಮಿರೇಟ್ಸ್ ಸಂಸ್ಥೆ ದುಬೈನಿಂದ ಆಕ್ಲೆಂಡ್​ಗೆ 14,120 ಕಿ.ಮೀ. ದೂರ ನಿಲುಗಡೆ ರಹಿತ ಹಾರಾಟ ನಡೆಸುತಿತ್ತು. ಏರ್ ಇಂಡಿಯಾ ಕೂಡ ನಿಲುಗಡೆ ರಹಿತ ದೂರ ಪ್ರಯಾಣ  ಮಾಡುತ್ತಿತ್ತಾದರೂ ಇಷ್ಟು ಪ್ರಮಾಣದ ದೂರವನ್ನು ಕ್ರಮಿಸಿರಲಿಲ್ಲ. ಈ ಮುನ್ನ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾ ಅಟ್ಲಾಂಟಿಕ್ ಸಾಗರ ಮೇಲ್ಭಾಗದಿಂದ ವಿಮಾನ ಹಾರಾಟ  ನಡೆಸುತ್ತಿತ್ತು. ಈ ಮಾರ್ಗ 13,900 ಕಿ.ಮೀ. ದೂರ ಇದ್ದು, ವಿಶ್ವದ ಎರಡನೇ ಅತಿ ದೂರದ ನಿಲುಗಡೆ ರಹಿತ ಮಾರ್ಗ ಎಂಬ ಹೆಗ್ಗಳಿಕೆ ಪಡೆದಿತ್ತು.

ಈದೀಗ ಈ ಮಾರ್ಗಕ್ಕೆ ಬದಲಾಗಿ ಏರ್ ಇಂಡಿಯಾ ಫೆಸಿಫಿಕ್ ಸಾಗರದ ಮೇಲ್ಭಾಗದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ವಿಮಾನ ಹಾರಾಟ ನಡೆಸಿದೆ. ಈ ಹೊಸ ಮಾರ್ಗ 1,400 ಕಿ.ಮೀ. ಹೆಚ್ಚು ದೂರ  ಹೊಂದಿದ್ದರೂ ಸಹ ಸುಮಾರು 2 ಗಂಟೆ ಕಡಿಮೆ ಅವಧಿಯಲ್ಲಿ ಗುರಿ ತಲುಪಬಹುದಾಗಿದೆ ಎಂಬುದನ್ನು ಏರ್ ಇಂಡಿಯಾದ ಹೊಸ ಪ್ರಯಾಣ ಸಾಬೀತು ಪಡಿಸಿದೆ.

ಏರ್ ಇಂಡಿಯಾದ ಬೋಯಿಂಗ್ 777 200 ವಿಮಾನವನ್ನು ಸುಧೀರ್ಘ ಪ್ರಯಾಣಕ್ಕೆ ಬಳಸಿಕೊಳ್ಳಲಾಗಿದ್ದು, ಒಟ್ಟು 9600 ಲೀಟರ್ ಇಂಧನ ಈ ಪ್ರಯಾಣಕ್ಕೆ ಖರ್ಚಾಗಿದೆ. ಏರ್ ಇಂಡಿಯಾದ ಈ  ದಾಖಲೆಯಲ್ಲಿ ನಾಲ್ಕು ಪೈಲಟ್ ಗಳ ಶ್ರಮವಿದ್ದು, ಪೈಲಟ್ ಗಳಾದ ಕ್ಯಾಪ್ಟನ್ ರಜನೀಶ್ ಶರ್ಮಾ, ಗೌತಮ್ ವರ್ಮಾ, ಎಂಎ ಖಾನ್ ಹಾಗೂ ಎಸ್ ಎಂ ಪಲೇಕರ್ ಅವರ ಪಾಳಿ ಲೆಕ್ಕಾಚಾರದಲ್ಲಿ  ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ವಿಮಾನದ 10 ಸಿಬ್ಬಂದಿಗಳು ಕೂಡ ಸಾಥ್ ನೀಡಿದರು ಎಂದು ಏರ್ ಇಂಡಿಯಾ ಸಂಸ್ಥೆ ಹೇಳಿದೆ.

ಏರ್ ಇಂಡಿಯಾ ದಾಖಲೆಗೆ ನೆರವಾದ ಗಾಳಿಯ ದಿಕ್ಕು

ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದರಿಂದ ಗಾಳಿ ಸಹ ಅದೇ ದಿಕ್ಕಿನಲ್ಲಿ ಬೀಸುತ್ತದೆ. ಇದರಿಂದ ಪಶ್ಚಿಮದಿಂದ ಪೂರ್ವಕ್ಕೆ ಸಾಗುವ ಮಾರ್ಗದಲ್ಲಿ ಗಾಳಿಯ ಘರ್ಷಣೆ ಕಡಿಮೆ ಇರುತ್ತದೆ.  ಹಾಗಾಗಿ ವಿಮಾನ ವೇಗವಾಗಿ ಸಾಗಲು ಅನುಕೂಲವಾಗುತ್ತದೆ. ಜತೆಗೆ ಇಂಧನ ಬಳಕೆ ಪ್ರಮಾಣ ಸಹ ಕಡಿಮೆಯಾಗಲಿದೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್