ಕೊಯಮತ್ತೂರು: ಖಾಯಿಲೆ ಪೀಡಿತ 30 ವರ್ಷದ ಆನೆಯೊಂದು ಮರಿಗೆ ಜನ್ಮ ನೀಡುವ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ.
ಕೊಯಮತ್ತೂರಿನ ಚಡಿವಯಾಲ್ ಆನೆ ಶಿಬಿರದಲ್ಲಿ ಈ ಘಟನೆ ಸಂಭವಿಸಿದ್ದು, ಇಂದು ಮುಂಜಾನೆ ಆನೆ ಗಂಡು ಮರಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮುಂಜಾನೆ ಸುಮಾರು 4.30ರ ಹೊತ್ತಿನಲ್ಲಿ ಆನೆ ಗಂಡು ಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಆನೆ ಎರಡೂ ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಬಹಳ ದಿನಗಳಿಂದಲೂ ತಾಯಿ ಆನೆ ಖಾಯಿಲೆಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು, ಹೀಗಾಗಿ ಆನೆಯನ್ನು ಕೋವೈ ಕುಟ್ರಾಲಂನ ಚಡಿವಯಾಲ್ ಆನೆ ಶಿಬಿರಕ್ಕೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿ ಆನೆಗೆ ಬೊಳುವಂಪಟ್ಟಿ ಅರಣ್ಯಾಧಿಕಾರಿ ಸಿ ದಿನೇಶ್ ಕುಮಾರ್ ಅಧೀನದಲ್ಲಿ ಅರಣ್ಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.