ನವದೆಹಲಿ: ಪಾಕಲಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾ ಜಮ್ಮು-ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರ ದಾಳಿಗೆ ಹೊಣೆ ಹೊತ್ತುಕೊಂಡಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಉರಿ ದಾಳಿಯಲ್ಲಿ ಮೃತಪಟ್ಟ ಉಗ್ರರಿಗೆ ಲಷ್ಕರ್-ಎ- ತೊಯ್ಬಾ ಹಾಗೂ ಜಮಾತ್ ಉದ್- ದವಾ ಉಗ್ರ ಸಂಘಟನೆಗಳು ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಶ್ರದ್ಧಾಂಜಲಿ ಕಾರ್ಯಕ್ರಮದ ಪೋಸ್ಟರ್ ನಲ್ಲಿ ಉರಿ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ 20 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಹೊಣೆ ಹೊತ್ತಿದೆ.
"ಕಾಶ್ಮೀರದಲ್ಲಿ ಹಿಂದೂ ಯೋಧರನ್ನು ಹತ್ಯೆ ಮಾಡಿದ ಹುತಾತ್ಮ ಉಗ್ರರಾದ ಮುಜಾಹಿದ್ ಭಾಯ್ ಅಬು, ಸಿರಾಖ್ ಮುಹಮ್ಮದ್ ಅನಾಸ್ ಗೆ ಶ್ರದ್ಧಾಂಜಲಿ ಕಾರ್ಯಕ್ರಮ" ಎಂಬ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗದಲ್ಲಿ ಹರಿದಾಡುತ್ತಿವೆ. ಉರಿ ದಾಳಿಯಲ್ಲಿ ತನ್ನ ನೆಲದ ಭಯೋತ್ಪಾದಕರ ಪಾತ್ರವಿಲ್ಲ ಎಂದು ಪಾಕಿಸ್ತಾನ ಹೇಳುತ್ತಿರುವ ಸಂದರ್ಭದಲ್ಲೇ ಪಾಕ್ ಉಗ್ರ ಸಂಘಟನೆ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆ ಉರಿ ದಾಳಿಗೆ ಹೊಣೆ ಹೊತ್ತಿರುವುದು ಮಹತ್ವ ಪಡೆದುಕೊಂಡಿದೆ.