ನವದೆಹಲಿ: ವಿಜಯ್ ಮಲ್ಯ ರೀತಿ ವರ್ತಿಸಬೇಡಿ, ಭಾರತಕ್ಕೆ ಹಿಂದಿರುಗಿ ಎಂದು ದೆಹಲಿ ಹೈಕೋರ್ಟ್ ಮಾಂಸ ರಫ್ತುದಾರ ಮೊಯಿನ್ ಖುರೇಷಿಗೆ ಸೂಚಿಸಿದೆ.
ವಿಜಯ ಮಲ್ಯ ಮಾಡಿದ್ದನ್ನು, ಫ್ಯಾಶನ್ ಗಾಗಿ ನೀವು ಮಾಡಬೇಡಿ, ನವೆಂಬರ್ ಮಧ್ಯದಲ್ಲಿ ಭಾರತಕ್ಕೆ ಹಿಂದಿರುಗಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕೆಂದು ನ್ಯಾಯಮೂರ್ತಿ ಎ.ಕೆ ಫಠಕ್ ಸೂಚಿಸಿದ್ದಾರೆ.
ನೀವು ದುಬೈಗೆ ತೆರಳಿದ್ದೀರಿ, ಇದು ನಿಮಗೆ ಕೋರ್ಟ್ ಗೆ ಹಾಜರಾಗಲು ಇಷ್ಟವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು, ಮಲ್ಯ ದಾರಿಯಲ್ಲಿ ನೀವು ನಡೆಯಬೇಡಿ ಎಂದು ಕೋರ್ಟ್ ಎಚ್ಚರಿಸಿದೆ.
ವಾಲಾ ರೀತಿಯ ಹಣಕಾಸು ದಂಧೆ ಹಾಗೂ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ದಿಲ್ಲಿ ಮೂಲದ ಮಾಂಸ ರಫ್ತುದಾರ ಮೊಯಿನ್ ಖುರೇಷಿ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆತ ದೇಶ ಬಿಟ್ಟು ಪರಾರಿಯಾಗದಂತೆ ನೋಡಿಕೊಳ್ಳಲು "ಲುಕ್ ಔಟ್ ಸುತ್ತೋಲೆ ಹೊರಡಿಸಿತ್ತು..
ಅಕ್ಟೋಬರ್ 15 ರಂದು ಮೊಯಿನ್ ಖುರೇಷಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಾಗ ಆತನನ್ನು ತಡೆದು ನಿಲ್ಲಿಸಿದ ಅಧಿಕಾರಿಗಳು, ಆತನನ್ನು ವಶಕ್ಕೆ ಪಡೆದು, ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದರು. ಈ ನಡುವೆ, ನ್ಯಾಯಾಲಯದ ಆದೇಶ ವೊಂದನ್ನು ಅಧಿಕಾರಿಗಳಿಗೆ ತೋರಿಸಿದ ಖುರೇಷಿ, ತನ್ನ ವಿದೇಶ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ವಾದಿಸಿದ. ಅದನ್ನು ಪರಿಶೀಲಿಸಿದ ಅಧಿಕಾರಿಗಳು ಆತ ಪ್ರಯಾಣ ಮುಂದುವರಿ ಸಲು ಅವಕಾಶ ಕೊಟ್ಟರು. ಖುರೇಷಿಯನ್ನು ವಶಕ್ಕೆ ಪಡೆಯುವ ಧಾವಂತದೊಂದಿಗೆ ವಿಮಾನ ನಿಲ್ದಾಣವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಲುಪಿದಾಗಲೇ ವಲಸೆ ವಿಭಾಗಕ್ಕೆ ಪ್ರಮಾದದ ಅರಿವಾಯಿತು.