ನವದೆಹಲಿ: ಕೆಳಗೆ ಬಿದ್ದರೂ ಮೀಸೆ ಮಣ್ಣಗಾಗಲಿಲ್ಲ ಎಂಬಂತೆ ತನ್ನ ಹಳೆಯ ಚಾಳಿಯನ್ನು ಪಾಕಿಸ್ತಾನ ಮುಂದುವರೆಸಿದ್ದು, ಮಾಡಿದ ತಪ್ಪನ್ನು ಒಪ್ಪಿಕೊಂಡು ತಲೆತಗ್ಗಿಸುವ ಬದಲು ಭಾರತದ ವಿರುದ್ಧವೇ ಹರಿಹಾಯುವ ಮೂಲಕ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ ಅವರು ತಮ್ಮ ಭಂಡತನವನ್ನು ಪ್ರದರ್ಶಸಿದ್ದಾರೆ.
ರಕ್ಷಣಾ ಸಚಿವಾಲಯದ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿಸುತ್ತಿದ್ದ ಪಾಕಿಸ್ತಾನ ದೂತವಾಸ ಅಧಿಕಾರಿ ಅಖ್ರರ್ ಅವರ ವಿರುದ್ಧದ ಆರೋಪವನ್ನು ಬಸಿತ್ ಅವರು ತಿರಸ್ಕರಿಸಿದ್ದಾರೆ.
ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ತನ್ನ ರಾಜತಾಂತ್ರಿಕ ಸ್ಥಾನಮಾನಕ್ಕೆ ಧಕ್ಕೆ ಬರುವಂತಹ ಕೆಲಸವನ್ನು ಪಾಕಿಸ್ತಾನ ಎಂದಿಗೂ ಮಾಡುವುದಿಲ್ಲ. ಪಾಕಿಸ್ತಾನ ರಾಯಭಾರಿ ಅಧಿಕಾರಿಗಳನ್ನು ವಶಕ್ಕೆ ಪಡೆದು, ಹಲ್ಲೆ ನಡೆಸಿರುವ ವಿದೇಶಾಂಗ ಸಚಿವ ಜೈಶಂಕರ್ ಅವರ ನಡೆಯನ್ನು ನಾವು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದೌರ್ಜನ್ಯದ ಕುರಿತು ವಿಶ್ವದ ಗಮನವನ್ನು ಬೇರೆಡೆ ಸೆಳೆಯು ಭಾರತ ಮಾಡಿರುವ ಕುತಂತ್ರ ಇದಾಗಿದ್ದು, ದೂತವಾಸ ಸಿಬ್ಬಂದಿಗಳನ್ನು ಅಕ್ರಮವಾಗಿ ಬಂಧಿಸಿ ಹಲ್ಲೆ ನಡೆಸಿರುವುದು 1961ರ ವೆಯೆನ್ನಾ ಒಡಂಬಡಿಕೆಯನ್ನು ಉಲ್ಲಂಘನೆ ಮಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ.