ದೇಶ

ಗಡಿಯಲ್ಲಿ ಪಾಕ್ ದಾಳಿ: ಪ್ರಮುಖ ಸಮರಾಭ್ಯಾಸಕ್ಕೆ ಸಿದ್ಧಗೊಂಡ ನೌಕಾ ಪಡೆ

Srinivas Rao BV

ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ದಾಳಿ ಮುಂದುವರೆದಿರುವ ಹಿನ್ನೆಲೆಯಲ್ಲಿ ನೌಕಾಪಡೆಯ ಪ್ರಮುಖ ಸಮರಾಭ್ಯಾಸ ನಡೆಸಲು ಯೋಜನೆ ರೂಪಿಸಿದೆ.

ಪಶ್ಚಿಮ್ ಲೆಹರ್( ವೆಸ್ಟ್ರನ್ ವೇವ್) ಹೆಸರಿನಲ್ಲಿ ಭಾರತೀಯ ನೌಕಾಪಡೆ ಅರಬ್ಬೀ ಸಮುದ್ರದಲ್ಲಿ ಮುಂದಿನ ವಾರದಿಂದ ಸಮರಾಭ್ಯಾಸ ನಡೆಸಲಿದೆ. ಸಮರಾಭ್ಯಾಸದ ಭಾಗವಾಗಿ ಈಗಾಗಲೇ 40 ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು, ಫೈಟರ್ ಜೆಟ್ ಗಳು ಸಿದ್ಧಗೊಂಡಿವೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೆ ವೇಳೆ ರಕ್ಷಣಾ ಸಚಿವಾಲಯ ಸೇನೆಯ ಮೂರೂ ವಿಭಾಗಗಳಿಗೂ ತುರ್ತು ಹಣಕಾಸು ಅಧಿಕಾರವನ್ನು ಮಂಜೂರು ಮಾಡಿದ್ದು, ಭಾರತದ ಮೇಲೆ ಪಾಕಿಸ್ತಾನ ಸೇನೆ ಬಾರ್ಡರ್ ಆಕ್ಷನ್ ಟೀಮ್ ಮೂಲಕ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆ ಪ್ರಮುಖ ಸಮಾರಾಭ್ಯಾಸಕ್ಕೆ ಮುಂದಾಗುತ್ತಿದ್ದು ನವೆಂಬರ್ 2 ರಿಂದ 14 ರ ವರೆಗೆ ಸಮರಾಭ್ಯಾಸ ನಡೆಯಲಿದೆ.

SCROLL FOR NEXT