ದೇಶ

ಉತ್ತರಾಖಂಡ್: ಜಲಪ್ರಳಯಕ್ಕೆ ಸಿಲುಕಿದ್ದ ಅಂಚೆ ಕಚೇರಿ 3 ವರ್ಷಗಳ ನಂತರ ಪುನಾರಂಭ

Srinivas Rao BV

ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ 2013 ರಲ್ಲಿ ಸಂಭವಿಸಿದ್ದ ಜಲಪ್ರಳಯದಲ್ಲಿ ಕೊಚ್ಚಿ ಹೋಗಿದ್ದ ಕೇದಾರನಾಥ ದೇವಾಲಯದ ಬಳಿ ಇದ್ದ ಅಂಚೆ ಕಚೇರಿ ಈಗ ಮತ್ತೆ ಕಾರ್ಯಾರಂಭ ಮಾಡಿದೆ.

ಕೇದಾರನಾಥ ದೇವಾಲಯದ ಮುಖ್ಯ ಅರ್ಚಕರು ಅ.29 ರಂದು ಹೊಸ ಕಛೇರಿಯಿಯನ್ನು ಪೂಜೆ ಮಾಡುವ ಮೂಲಕ ಉದ್ಘಾಟಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2013 ರ ಜೂನ್ ನಲ್ಲಿ ಜಲಪ್ರಳಯ ಉಂಟಾದ ಪರಿಣಾಮ 5,700 ಜನರು ಸಾವನ್ನಪ್ಪಿದ್ದರು,  ಜಲಪ್ರಳಯದಿಂದ ಉಂಟಾದ 3 ವರ್ಷಗಳ ನಂತರ ಹಾನಿಯನ್ನು ಸರಿಪಡಿಸಲಾಗಿದ್ದು, ಅಂಚೆ ಕಚೇರಿಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಪುನಃ ಪ್ರಾರಂಭವಾಗಿರುವುದು ಸಂತಸ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇದಾರನಾಥದಲ್ಲಿರುವ ಅಂಚೆ ಕಚೇರಿಯ ಪ್ರಧಾನ ಕಚೇರಿ ರುದ್ರಪ್ರಯಾಗದಲ್ಲಿದ್ದು, ವಿತರಣಾ ಕೇಂದ್ರವನ್ನಾಗಿ ಕೇದಾರನಾಥದಲ್ಲಿರುವ ಕಚೇರಿಯನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT