ದೇಶ

ಕೇರಳ: ಬೀದಿ ನಾಯಿಗಳನ್ನು ಕೊಂದರೆ ಚಿನ್ನದ ನಾಣ್ಯ ಬಹುಮಾನ!

Srinivas Rao BV

ತಿರುವನಂತಪುರಂ: ಅತಿ ಹೆಚ್ಚು ಬೀದಿ ನಾಯಿಗಳನ್ನು ಕೊಲ್ಲುವ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಚಿನ್ನದ ನಾಣ್ಯಗಳನ್ನು ಬಹುಮಾನ ನೀಡುವುದಾಗಿ ಕೇರಳದ ಪ್ರಮುಖ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಘೋಷಿಸಿದೆ.  

ಡಿ.10 ರ ವರೆಗೆ ಗಡುವು ನೀಡಿ ಅತಿ ಹೆಚ್ಚು ಬೀದಿ ನಾಯಿಗಳನ್ನು ಕೊಳ್ಳಲಾಗುವ ಪ್ರದೇಶದ ಪಂಚಾಯ್ತಿ ಮುಖ್ಯಸ್ಥರಿಗೆ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಹೇಳಿರುವ ಹಳೆ ವಿದ್ಯಾರ್ಥಿಗಳ ಸಂಘ, ಇತ್ತೀಚೆಗಷ್ಟೇ ಹಿಂಸಾತ್ಮಕ ನಾಯಿಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಸಬ್ಸಿಡಿ ದರದಲ್ಲಿ ಏರ್ ಗನ್ ಗಳನ್ನು ನೀಡುವುದಾಗಿ ಘೋಷಿಸಿತ್ತು. ಅಷ್ಟೇ ಅಲ್ಲದೆ ಜನರಿಗೆ ಉಪಟಳ ನೀಡುತ್ತಿರುವ ಬೀದಿ ನಾಯಿಗಳನ್ನು ಕೊಳ್ಳುವವರಿಗೆ ನಗದು ಬಹುಮಾನ ನೀಡುವುದಾಗಿಯೂ ಸೆಂಟ್ ಥಾಮಸ್ ಕಾಲೇಜ್ ನ ಹಳೆಯ ವಿದ್ಯಾರ್ಥಿಗಳ ಸಂಘಟನೆ ಹೇಳಿತ್ತು. ಕಳೆದ 4 ತಿಂಗಳಲ್ಲಿ 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಬೀದಿ ನಾಯಿಗಳನ್ನು ಕೊಂದರೆ ಚಿನ್ನದ ನಾಣ್ಯ ಬಹುಮಾನ ನೀಡುವುದಾಗಿ ಘೋಷಿಸಿದೆ.

SCROLL FOR NEXT