ಭೋಪಾಲ್: ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ಸೋಮವಾರ ಬೆಳಗಿನ ಜಾವ ಪರಾರಿಯಾಗಿದ್ದ ನಿಷೇಧಿತ ಸಿಮಿ ಸಂಘಟನೆಯ 8 ಉಗ್ರರನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಜೈಲಿನ ಮುಖ್ಯ ಪೇದೆಯನ್ನು ಕೊಂದು ಪರಾರಿಯಾಗಿದ್ದ ಎಂಟು ಮಂದಿ ಉಗ್ರರನ್ನು ಭೋಪಾಲ್ ಹೊರವಲಯದ ಐಂತಿಕೇಡಿ ಗ್ರಾಮದಲ್ಲಿ ಹತ್ಯೆ ಮಾಡಲಾಗಿದೆ.
ಉಗ್ರರು ಪರಾರಿ ಪ್ರಕರಣ ಸಂಬಂಧ ಮಧ್ಯಪ್ರದೇಶ ಸರ್ಕಾರ ಜೈಲು ಅಧೀಕ್ಷಕ ಸೇರಿದಂತೆ ಐವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ಅಲ್ಲದೆ ಉಗ್ರರ ಪತ್ತೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸ ತೀವ್ರ ಕಾರ್ಯಚಾರಣೆಗೆ ಆದೇಶಿಸಿತ್ತು.
ಉಗ್ರರು ಜೈಲಿನಿಂದ ಪರಾರಿಯಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿತ್ತು.
ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಉಗ್ರರು ಜೈಲಿನ ಭದ್ರತಾ ಸಿಬ್ಬಂದಿಯನ್ನು ಕೊಂದು, ಜೈಲಿನಿಂದ ಪರಾರಿಯಾಗಿದ್ದು, ಪರಾರಿಯಾಗಿರುವ ಎಲ್ಲ ಉಗ್ರರು 1977 ಏಪ್ರಿಲ್ ನಲ್ಲಿ ಭಾರತದಿಂದ ನಿಷೇಧಕ್ಕೆ ಒಳಪಟ್ಟಿದ್ದ ಸ್ಟೂಡೆಂಟ್ಸ್ ಆಫ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಗೆ ಸೇರಿದವರು ಎಂದು ತಿಳಿದುಬಂದಿದೆ.
ಭೋಪಾಲ್ ಸೆಂಟ್ರಲ್ ಜೈಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ರಮಾಶಂಕರ್ ಅವರನ್ನು ಚಾಕುವಿನಿಂದ ಇರಿದು ಉಗ್ರರು ಕೊಂದಿದ್ದು, ತಮ್ಮ ಬಳಿ ಇದ್ದ ಬೆಡ್ ಶೀಟ್ ಅನ್ನು ಹಗ್ಗದ ರೀತಿ ಉಪಯೋಗಿಸಿ ಜೈಲು ಗೋಡೆ ಹಾರಿ ಪರಾರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics