ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 
ದೇಶ

ಕಾಶ್ಮೀರದಲ್ಲಿ ಪೆಲ್ಲೆಟ್ ಬದಲು ಪಾವಾ ಶೆಲ್ ಬಳಕೆಗೆ ಕೇಂದ್ರ ಒಪ್ಪಿಗೆ

ಮೆಣಸಿನ ಪುಡಿ ಆಧಾರಿತ ಮಾರಕವಲ್ಲದ ಯುದ್ಧ ಸಾಮಗ್ರಿಯನ್ನು ಹೊಂದಿರುವ ಪಾವಾ ಶೆಲ್ ಗಳನ್ನು...

ನವದೆಹಲಿ: ಮೆಣಸಿನ ಪುಡಿ ಆಧಾರಿತ ಮಾರಕವಲ್ಲದ ಯುದ್ಧ ಸಾಮಗ್ರಿಯನ್ನು ಹೊಂದಿರುವ ಪಾವಾ ಶೆಲ್ ಗಳನ್ನು ಕಾಶ್ಮೀರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ನಿಯಂತ್ರಿಸಲು ಪೆಲ್ಲೆಟ್ ಗನ್ ಗಳ ಬದಲಿಗೆ ಬಳಸಲು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಶನಿವಾರ ಒಪ್ಪಿಗೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಸಲು ಸರ್ವಪಕ್ಷ ನಿಯೋಗ ಭೇಟಿ ನೀಡುವುದಕ್ಕೆ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ.
ಮಾರಕವಲ್ಲದ ಯುದ್ಧ ಸಾಮಗ್ರಿಗಳನ್ನು ಹೊಂದಿದ ಪಾವಾ ಶೆಲ್ ಗಳನ್ನು ಪ್ರತಿಭಟನಾಕಾರರ ಮೇಲೆ ಪ್ರಯೋಗಿಸಿದರೆ ತಾತ್ಕಾಲಿಕವಾಗಿ ಅವರ ಗುರಿಗಳನ್ನು ಅಶಕ್ತಗೊಳಿಸಬಹುದು ಮತ್ತು ಹಲವಾರು ನಿಮಿಷಗಳ ಕಾಲ ನಿಶ್ಚಲವಾಗಿ ಇರಿಸಬಹುದು. 
ಉಗ್ರಗಾಮಿ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ, ಪ್ರತಿಭಟನೆ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ತಜ್ಞರ ಸಮಿತಿ ಈ ಆಯ್ಕೆಯನ್ನು ನೀಡಿತ್ತು.
ಗೃಹ ಸಚಿವಾಲಯ, ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಜಮ್ಮು-ಕಾಶ್ಮೀರ ಪೊಲೀಸ್, ಐಐಟಿ-ದೆಹಲಿ ಮತ್ತು ಫ್ಯಾಕ್ಟರಿ ಬೋರ್ಡ್ ಫಿರಂಗಿಗಳ ಅಧಿಕಾರಿಗಳನ್ನೊಳಗೊಂಡ ಏಳು ಸದಸ್ಯರ ತಂಡ ನೀಡಿದ ಸಲಹೆ ಮೇರೆಗೆ ಈ ಶೆಲ್ ಗಳ ಬಳಕೆಗೆ ಸಲಹೆ ನೀಡಲಾಗಿತ್ತು.
ದೆಹಲಿಯಲ್ಲಿ ಶೆಲ್ ಗಳ ಬಳಕೆಯ ಸಂಪೂರ್ಣ ಪ್ರಯೋಗಾರ್ಥ ಪ್ರದರ್ಶನ ನಡೆಸಲಾಗಿತ್ತು. ಪರೀಕ್ಷೆ ನಡೆಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನಾಕಾರರ ಗುಂಪನ್ನು ಹತೋಟಿಯಲ್ಲಿಡಲು ಶೆಲ್ ಬಳಕೆಗೆ ಒಪ್ಪಿಗೆ ನೀಡಲಾಯಿತು. 
ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ನಿಯಂತ್ರಿಸಲು ಇದುವರೆಗೆ ಪೆಲ್ಲೆಟ್ ಗನ್ ಗಳನ್ನು ಬಳಸಲಾಗುತ್ತಿತ್ತು. ಅದರಿಂದ ತೀವ್ರ ಕುರುಡುತನ ಮತ್ತು ಜನರಿಗೆ ತೀವ್ರ ಗಾಯವಾಗುವುದರಿಂದ ಅದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾವಾ ಶೆಲ್ ಗಳನ್ನು ಇನ್ನು ಮುಂದೆ ಬಳಸಲಾಗುತ್ತದೆ. 
ಗ್ವಾಲಿಯರ್ ನ ಗಡಿ ಭದ್ರತಾ ಪಡೆಯ ಟಿಯರ್ ಸ್ಮೋಕ್ ಯೂನಿಟ್(ಟಿಎಸ್ ಯು)ನ್ನು ಶೆಲ್ ಗಳ ತಯಾರಿಕೆಗೆ ಸಮಿತಿ ಶಿಫಾರಸು ಮಾಡಿದೆ.ಮೊದಲ ಬಾರಿಗೆ 50 ಸಾವಿರ ಪಾವಾ ಶೆಲ್ ಗಳನ್ನು ಉತ್ಪಾದಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!