ನವದೆಹಲಿ: ಪತ್ರಕರ್ತರಿಗೆ ಅವಮಾನಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ಭಗವಂತ್ ಮಾನ್ ವಿರುದ್ಧ ಶನಿವಾರ ಎಫ್ಐಆರ್ ದಾಖಲಾಗಿದೆ.
ಖಾಸಗಿ ಹಿಂದಿ ಪತ್ರಿಕೆಯ ಪತ್ರಕರ್ತರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪಂಜಾಬ್ ನ ಬಸ್ಸಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಗವಂತ್ ಮಾನ್ ವಿರುದ್ಧ ಎಫ್ಐಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಫತೇಗರ್ಹ್ ಸಾಹಿಬ್ ನ ಬಸ್ಸಿ ಪಟ್ಟಣದಲ್ಲಿ ಗುರುವಾರ ರ್ಯಾಲಿಯೊಂದನ್ನು ಏರ್ಪಡಿಸಲಾಗಿತ್ತು. ರ್ಯಾಲಿಗೆ ಭಗವಂತ್ ಮಾನ್ ಅವರು ತಡವಾಗಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಭಗವಂತ್ ಅವರಿಗೆ ಸೆಕ್ಸ್ ಸಿಡಿ ವಿವಾದ ಸೇರಿದಂತೆ ಕೆಲ ಪ್ರಶ್ನೆಗಳನ್ನು ಕೇಳಿದ್ದರು.
ಈ ವೇಳೆ ಪತ್ರಕರ್ತರ ವಿರುದ್ಧ ಹರಿಹಾಯ್ದಿದ್ದ ಭಗವಾಂತ್ ಮಾನ್ ಅವರು, ದುಡ್ಡು ತೆಗೆದುಕೊಂಡು ಸುದ್ದಿ ಬರೆಯುತ್ತೀರಿ. ದುಡ್ಡು ಕೊಡದೆ ಇದ್ದರೆ ಅಂತಹ ವಿಚಾರಗಳನ್ನು ನಿರ್ಲಕ್ಷ್ಯ ಮಾಡುತ್ತೀರಿ. ಇಲ್ಲಿರುವ ಪ್ರತೀಯೊಬ್ಬ ಪತ್ರಕರ್ತನ ರೇಟ್ ಏನೆಂಬುದು ನನಗೆ ಗೊತ್ತಿದೆ. ಆಪ್ ಉತ್ತಮವಾಗಿದ್ದು, ಪೇಡ್ ಮೀಡಿಯಾಗಳ ಅವಶ್ಯಕತೆ ಅದಕ್ಕಿಲ್ಲ. ನಮಗೆ ಯಾವುದೇ ಸುದ್ದಿಗಳು ಬೇಕಿಲ್ಲ. ಕೂಡಲೇ ವೇದಿಕೆಯಿಂದ ಹೊರಹೋಗಿ ಎಂದು ಹೇಳಿದ್ದರು.