ದೇಶ

ಪನಾಮಾ ಪೇಪರ್ಸ್: 200ಕ್ಕೂ ಹೆಚ್ಚು ಮಾಹಿತಿಗಳ ವಿನಿಮಯಕ್ಕೆ ಐಟಿ ಇಲಾಖೆ ಮನವಿ

Sumana Upadhyaya
ನವದೆಹಲಿ: ಪನಾಮಾ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ತನಿಖೆಯನ್ನು ವಿಸ್ತರಿಸಿರುವ ಆದಾಯ ತೆರಿಗೆ ಇಲಾಖೆ ಪಟ್ಟಿಯಲ್ಲಿ ಹೆಸರಿಸಿರುವ ಭಾರತೀಯರ ಬ್ಯಾಂಕಿಂಗ್ ಮತ್ತು ಹಣಕಾಸು ಅಂಕಿಅಂಶಗಳನ್ನು ಪಡೆಯಲು ಅನೇಕ ತೆರಿಗೆ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿದ್ದು, ಸುಮಾರು 200 ಮನವಿಗಳನ್ನು ಕಳುಹಿಸಿದೆ.
ಇಂತಹ ಸುಮಾರು 192 ಮನವಿಗಳನ್ನು ಈಗಾಗಲೇ ವಿದೇಶಗಳಿಗೆ ಕಳುಹಿಸಲಾಗಿದ್ದು, 12ಕ್ಕೂ ಹೆಚ್ಚು ದಾಖಲೆಗಳು ಬಹಿರಂಗವಾಗಬೇಕಿದೆ. ಅಮೆರಿಕಾ, ಇಂಗ್ಲೆಂಡ್, ಸಿಂಗಾಪೂರ ಮೊದಲಾದ ದೇಶಗಳಿಗೆ ಈ ದಾಖಲೆಗಳನ್ನು ಉಲ್ಲೇಖಿಸಲಾಗಿದ್ದು, ಕೆರಿಬಿಯನ್ ದ್ವೀಪ, ಸ್ವಿಡ್ಜರ್ಲೆಂಡ್, ಬ್ರಿಟಿಷ್ ವರ್ಜಿನ್ ದ್ವೀಪ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳಲ್ಲಿಯೂ ಪೇಪರ್ಸ್ ಲೀಕ್ ದಾಖಲೆಗಳು ಸೇರಿಕೊಂಡಿವೆ. 
ಪನಾಮಾ ದಾಖಲೆಯಲ್ಲಿ ಸುಮಾರು 380 ಘಟಕಗಳು ಮತ್ತು ವ್ಯಕ್ತಿಗಳ ಹೆಸರುಗಳಿದ್ದು, ಅವುಗಳಲ್ಲಿ 200ಕ್ಕಿಂತ ಕಡಿಮೆ ವ್ಯಕ್ತಿಗಳು ಮತ್ತು ಘಟಕಗಳು ಖಾತೆಗಳನ್ನು ಹೊಂದಿದ್ದಾರೆ. ವಿವರ ಬಹಿರಂಗಪಡಿಸಲು ಒಪ್ಪದ ಮತ್ತು ಕೆಲವರ ಖಾತೆಗಳು ಎಲ್ಲಿವೆ ಎಂದು ತಿಳಿಯದ ಖಾತೆಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT