ದೇಶ

ಸ್ವಾತಂತ್ರ್ಯ ಹೋರಾಟದ ವೇಳೆ ನೇತಾಜಿ ಬಳಸಿದ್ದ ಕಾರಿಗೆ ಮರು ಜೀವ

Srinivas Rao BV

ಕೋಲ್ಕತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಬಳಸಿದ್ದ ಜರ್ಮನ್ ಮಾಡಲ್ ವಾಂಡರರ್‍ ಕಾರು ಮರು ಜೀವ ಪಡೆಯುತ್ತಿದೆ.

ಸುಭಾಷ್ ಚಂದ್ರ ಬೋಸರ ಪೂರ್ವಿಕರ ಮನೆಯಲ್ಲಿರುವ ವಾಂಡರರ್ ಕಾರನ್ನು ನವೀಕರಣಗೊಳಿಸಲು ನೇತಾಜಿ ರಿಸರ್ಚ್ ಬ್ಯುರೋ( ಎನ್ ಆರ್ ಬಿ) ಮುಂದಾಗಿದ್ದು, ಜರ್ಮನಿಯ ಕಾರು ತಯಾರಕ ಆಡಿ ಇದರ ಜವಾಬ್ದಾರಿ ವಹಿಸಿಕೊಂಡಿದೆ. ನವೀಕರಣ ಕಾಮಗಾರಿ ಚಾಲ್ತಿಯಲ್ಲಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕಾರಿನ ಎಲ್ಲಾ ಬಿಡಿಭಾಗಗಳನ್ನು ದುರಸ್ತಿಗೊಳಿಸಿ ಕಾರನ್ನು ಮೂಲಸ್ವರೂಪಕ್ಕೆ ತರಲಾಗುತ್ತದೆ ಎಂದು ಎನ್ ಆರ್ ಬಿ ಮುಖ್ಯಸ್ಥ ಕೃಷ್ಣ ಬೋಸ್ ತಿಳಿಸಿದ್ದಾರೆ. 1937 ರ ಕಾರನ್ನು ವೆಂಟೇಜ್ ತಜ್ಞ ಪಲ್ಲಭ್ ರಾಯ್ ಅವರ ಮಾರ್ಗದರ್ಶನದಲ್ಲಿ ನವೀಕರಣಗೊಳಿಸಲಾಗುತ್ತಿದೆ.  

ಬಿಎಲ್ ಎ 7169 ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಂಡರರ್ ಕಾರನ್ನು ನೇತಾಜು 1941 ರಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಜರ್ಮನಿಗೆ ತೆರಳುವಾಗ ಬಳಸಿದ್ದರು.

SCROLL FOR NEXT