ರಾಹುಲ್ ಗಾಂಧಿ-ನರೇಂದ್ರ ಮೋದಿ 
ದೇಶ

55 ವರ್ಷಗಳಲ್ಲಿ ರೈತರಿಗಾಗಿ ಕಾಂಗ್ರೆಸ್ ಮಾಡಿದ್ದೇನು?: ಬಿಜೆಪಿ ಪ್ರಶ್ನೆ

55 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ರೈತರ ಕಲ್ಯಾಣಕ್ಕಾಗಿ ಮಾಡಿದ್ದೇನು ಎಂದು ಭಾರತೀಯ ಜನತಾ ಪಕ್ಷ ಪ್ರಶ್ನಿಸಿದೆ.

ನವದೆಹಲಿ: 55 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ರೈತರ ಕಲ್ಯಾಣಕ್ಕಾಗಿ ಮಾಡಿದ್ದೇನು ಎಂದು ಭಾರತೀಯ ಜನತಾ ಪಕ್ಷ ಪ್ರಶ್ನಿಸಿದೆ. 
ಇಂದು ಉತ್ತರ ಪ್ರದೇಶದ ಡೆಯೋರಿಯಾದಲ್ಲಿ ರ್ಯಾಲಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರೈತರ ಸ್ಥಿತಿಯನ್ನು ಉಪೇಕ್ಷಿಸಿ ಪ್ರಧಾನಿ ಮೋದಿ ಉಳ್ಳವರ ಪರ ನಿಂತಿದ್ದಾರೆ ಎಂದು ದೂರಿದ ಕೆಲವೇ ಘಂಟೆಗಳಲ್ಲಿ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ. 
"ಅವರು ಅಧಿಕಾರದಲ್ಲಿದ್ದರೆ, ಅರ್ಧ ಶತಮಾನದವರೆಗೂ ರೈತರ ನೋವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಈಗ ಅಧಿಕಾರ ಕಳೆದುಕೊಂಡ ಮೇಲೆ ರೈತರ ಸ್ಥಿತಿ ಬಗ್ಗೆ ದಿಢೀರನೆ ಎಚ್ಚರವಾಗಿದೆ" ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಲೇವಡಿ ಮಾಡಿದ್ದಾರೆ. 
ರೈತರ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದಿರುವ ತ್ರಿವೇದಿ ಕಾಳಮಾರುಕಟ್ಟೆಯಲ್ಲಿ ಯೂರಿಯಾ ಮಾರಾಟ ತಡೆಯುವುದು ಮತ್ತು ಬೆಳೆ ನಾಶಕ್ಕಾಗಿ ಪರಿಹಾರ ನೀಡಲು ಫಸಲ್ ಭೀಮಾ ಯೋಜನೆಯನ್ನು ಅನುಷ್ಠಾನ ಮಾಡಿರುವುದು ಹೀಗೆ ಹಲವಾರು ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ. 
"ಅವರ ಯೋಚನೆಗೂ ನಮ್ಮ ಯೋಚನೆಗೂ ಅಜಗಜಾಂತರ ವ್ಯತ್ಯಾಸವಿದೆ" ಎಂದು ಕೂಡ ಅವರು ಹೇಳಿದ್ದಾತೆ. 
"ಯುಪಿಎ ಸರ್ಕಾರ ರೈತರ ಹಿತಾಸಕ್ತಿಗೆ ಮಾರಕವಾಗಿದ್ದ ಹಲವಾರು ಒಪ್ಪಂದಗಳನ್ನು ವಿಶ್ವ ಮಾರಾಟ ಸಂಸ್ಥೆ (ಡಬ್ಲ್ಯೂ ಟಿ ಒ) ದೊಂದಿಗೆ ಮಾಡಿಕೊಂಡಿದ್ದನ್ನು ನೆನಪಿಸಲು ಬಯಸುತ್ತೇನೆ. ನಮ್ಮ ಮೇಲೆ ಅಂತಾರಾಷ್ಟ್ರೀಯ ಒತ್ತಡವಿದ್ದರೂ, ಟೀಕೆಯಿದ್ದರೂ ಅಂತಹ ಒಪ್ಪಂದಗಳನ್ನು ವಜಾ ಮಾಡಿದ್ದೇವೆ. 
"ಅರ್ಧ ಶತಮಾನದವರೆಗೆ ರೈತರ ಭಾವನೆ ತಿಳಿಯದವರು ಈಗ ರೈತರ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ" ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ