ನವದೆಹಲಿ: ಇತರ ರಾಜ್ಯಗಳಿಗೆ ಹೋಲಿಸಿದರೆ ದೆಹಲಿ ಸರ್ಕಾರದ ಸಚಿವರು ವಿದೇಶಿ ಪ್ರವಾಸಗಳಿಗೆ ತೆರಳಿರುವುದು ಕಡಿಮೆ ಎಂದು ದೆಹಲಿ ಗೃಹಸಚಿವ ಸತ್ಯೇಂದರ್ ಜೈನ್ ಬುಧವಾರ ಹೇಳಿದ್ದಾರೆ.
"ಇತರ ಸರ್ಕಾರಗಳಿಗೆ ಹೋಲಿಸಿದರೆ ನಮ್ಮ ಸಚಿವರು ವಿದೇಶಿ ಪ್ರವಾಸಗಳಿಗೆ ಹೋಗಿದ್ದೆ ಕಡಿಮೆ ಮತ್ತು ಈ ವಿದೇಶಿ ಪ್ರವಾಸಗಳನ್ನು ಒಪ್ಪಿಗೆ ತೆಗೆದುಕೊಂಡು, ಅಗತ್ಯ ಬಿದ್ದರೆ ಮಾತ್ರ ಕೈಗೊಳ್ಳಲಾಗಿದೆ" ಎಂದು ಜೈನ್ ವರದಿಗಾರರಿಗೆ ಹೇಳಿದ್ದಾರೆ.
ದೆಹಲಿ ಸಚಿವ ವಿದೇಶಕ್ಕೆ ಸ್ವಂತ ಕೆಲಸದ ಮೇಲೆ ಹೋಗಿದ್ದರೆ ಅದರ ಖರ್ಚು ವೆಚ್ಚ ಅವರೇ ಭರಿಸಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ.
ದೆಹಲಿ ಸರ್ಕಾರದ ಸಚಿವರು, ಸಿಬ್ಬಂದಿಗಳು ಮತ್ತು ಅಧಿಕಾರಿಗಳು ವಿದೇಶಿ ಪ್ರವಾಸ ಮಾಡಿರುವ ವಿವರಗಳನ್ನು ನೀಡುವಂತೆ ಸೋಮವಾರ ಸರ್ಕಾರಕ್ಕೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೂಚಿಸರುವ ಹಿನ್ನಲೆಯಲ್ಲಿ ಜೈನ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಮದರ್ ತೆರೆಸಾ ಅವರ ಸಂತ ಪದವಿ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ವ್ಯಾಟಿಕನ್ ಸಿಟಿಗೆ ಹೋಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜೈನ್ ನವದೆಹಲಿಗೆ ಮಂಗಳವಾರವಷ್ಟೇ ಹಿಂದಿರುಗಿದ್ದಾರೆ.
ಫೆಬ್ರವರಿ 2015 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿಲಿಂದಲೂ ಅರವಿಂದ್ ಕೇಜ್ರಿವಾಲ್ ಅವರ ಮೊದಲ ವಿದೇಶಿ ಪ್ರವಾಸ ಇದು. ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಇಲ್ಲಿಯವರೆಗೂ ನಾಲ್ಕು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos