ಅರವಿಂದ್ ಕೇಜ್ರಿವಾಲ್-ಅಮನ್ ದೀಪ್ ಕೌರ್
ಪಂಜಾಬ್: ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಗೆ ಮುಜುಗರ ತರಿಸುವ ಮತ್ತೊಂದು ಗಂಭೀರ ಆರೋಪ ಆಪ್ ನಾಯಕರ ಮೇಲೆ ಬಂದಿದೆ.
ದೆಹಲಿಯ 52 ಆಪ್ ಮಹಿಳಾ ಕಾರ್ಯಕರ್ತರ ಮೇಲೆ ಪಕ್ಷದ ನಾಯಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಪ್ ಪಕ್ಷದ ಪಂಜಾಬ್ ನ ಫಿರೋಜ್ಪುರ ಘಟಕ ಮತ್ತು ರಾಜ್ಯ ಸಮಿತಿಯ ಮಾಜಿ ಸದಸ್ಯೆ ಅಮನ್ ದೀಪ್ ಕೌರ್ ಆರೋಪ ಮಾಡಿದ್ದಾರೆ.
ಆಪ್ ಮಹಿಳಾ ಸುರಕ್ಷತೆಯ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ಆದರೆ ಪಕ್ಷದೊಳಗಿರುವ ಮಹಿಳೆಯರಿಗೇ ರಕ್ಷಣೆಯಿಲ್ಲ ಎಂದು ಅಮನ್ ದೀಪ್ ಟೀಕಿಸಿದ್ದಾರೆ.
ಪಕ್ಷದಲ್ಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಮಾಹಿತಿ ನೀಡಿದ್ದೆ. ಆಪ್ ನಾಯಕರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ 52 ಕಾರ್ಯಕರ್ತೆಯರ ಪೈಕಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನುಳಿಂದ 51 ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಆಪ್ ಮಾಜಿ ಶಾಸಕ ಸಂದೀಪ್ ಕುಮಾರ್ ಸಿಡಿ ಪ್ರಕರಣದಿಂದ ಮುಜುಗರಕ್ಕೊಳಗಾಗಿದ್ದ ಆಪ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಬಂದಿದೆ. ಪಂಜಾಬ್ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಪಕ್ಷಕ್ಕೆ ಲೈಂಗಿಕ ಹಗರಣ ಸುತ್ತಿಕೊಳ್ಳುತ್ತಿರುವುದು ಅರವಿಂದ್ ಕೇಜ್ರಿವಾಲ್ ಗೆ ತಲೆನೋವಾಗಿ ಪರಿಣಮಿಸಿದೆ.