ಉತ್ತರ ಪ್ರದೇಶದ ಜಾನ್ಪುರದಲ್ಲಿ ರೋಡ್ ಶೋ ವೇಳೆ ಜನರಿಂದ ರಾಹುಲ್ ಗಾಂಧಿಗೆ ಸನ್ಮಾನ
ನವದೆಹಲಿ: ಆಪ್ ಪಿಕೆ ಟೀಮ್ ಸೆ ಹೆ, ನೀವು ಪಿಕೆ ತಂಡದವರಾ? ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಜಾನ್ಪುರದಲ್ಲಿ ನಡೆಸಿದ ಚುನಾವಣಾ ಪ್ರಚಾರದ ವೇಳೆ ರೈತರಿಂದ ಎದುರಾದ ಪ್ರಶ್ನೆ. ತಮ್ಮ ಮೊದಲ ಚುನಾವಣಾ ಯಾತ್ರೆಯನ್ನು ಆರಂಭಿಸಿರುವ ರಾಹುಲ್ ಗಾಂಧಿ ಗೋರಖ್ ಪುರದಿಂದ ಆರಂಭಿಸಿದ್ದು, ಪೂರ್ವ-ಕೇಂದ್ರ ಪ್ರದೇಶದಲ್ಲಿ ಸುಮಾರು 100 ವಿಧಾನ ಸಭಾ ಕ್ಷೇತ್ರಗಳಲ್ಲಿ ತಮ್ಮ ತಂಡದವರೊಂದಿಗೆ ಪ್ರಚಾರ ನಡೆಸಿದರು.
ಸಮಾಜವಾದಿ ಪಕ್ಷದ ಪ್ರಬಲ ಕ್ಷೇತ್ರವಾಗಿರುವ ಇಲ್ಲಿ ಕಾಂಗ್ರೆಸ್ ನ ಕೇವಲ ಒಬ್ಬರೇ ಒಬ್ಬ ಶಾಸಕರಿದ್ದಾರೆ. ಪಿರೆ ಎಂದು ರೈತರು ಉಲ್ಲೇಖ ಮಾಡಿದ್ದು ಪ್ರಶಾಂತ್ ಕಿಶೋರ್ ನನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರ ಸಲಹೆಗಾರ. ಪ್ರಶಾಂತ್ ಕಿಶೋರ್ ಮತ್ತವರ ತಂಡ ಅರ್ಜಿ ಹಿಡಿದುಕೊಂಡು ಮನೆಮನೆಗೆ ಹೋಗುತ್ತಾರೆ. ಯಾವ ರೈತರಿಗೆ ಎಷ್ಟು ಸಾಲವಿದೆ ಎಂದು ಮಾಹಿತಿ ಪಡೆಯುತ್ತಿದ್ದಾರೆ. ರಾಹುಲ್ ಗಾಂಧಿ ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಜನತಾ ಟ್ರಸ್ಟ್, ಮೋದಿ ಮಸ್ತ್(ಜನರು ಹತಾಶೆಯಲ್ಲಿದ್ದಾರೆ, ಮೋದಿ ಖುಷಿಯಾಗಿದ್ದಾರೆ) ಎಂದು ರಾಹುಲ್ ಗಾಂಧಿಯವರ ಈ ಬಾರಿಯ ಪ್ರಚಾರದ ಒಂದು ಸಾಲಿನ ಸ್ಲೋಗನ್. ಕಳೆದ ವಿಧಾನ ಸಭಾ ಚುನಾವಣೆಗಿಂತ ಈ ಬಾರಿ ಕಾಂಗ್ರೆಸ್ ಚುನಾವಣಾ ಪ್ರಚಾರದ ತಂತ್ರವನ್ನು ಬದಲಾಯಿಸಿದೆ. ಪ್ರಶಾಂತ್ ಕಿಶೋರ್ ತಂತ್ರ ಜನರ ಗಮನ ಸೆಳೆಯುತ್ತಿದೆ.