ದೇಶ

ಅಚ್ಛೇ ದಿನ್ ಘೋಷಣೆಯನ್ನು ಮೊದಲು ಪರಿಚಯಿಸಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್: ನಿತಿನ್ ಗಡ್ಕರಿ

Srinivas Rao BV

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸಿದ್ಧ ಘೋಷ ವಾಕ್ಯ ಅಚ್ಛೇ ದಿನ್ ನ್ನು ಮೊದಲು ಪರಿಚಯಿಸಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪರಿಚಯಿಸಿದ್ದ ಘೋಷವಾಕ್ಯ ಅಚ್ಛೇ ದಿನ್ ಈಗ ಎನ್ ಡಿ ಎ ಸರ್ಕಾರದ ಕೊರಳಿಗೆ ಹೊಣೆಯಾಗಿ ಪರಿಣಮಿಸಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಒಳ್ಳೆಯ ದಿನಗಳೆಂಬುದು ಒಬ್ಬರ ನಂಬಿಕೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ದೆಹಲಿಯಲ್ಲಿ ನಡೆದ ಅನಿವಾಸಿ ಭಾರತೀಯ(ಎನ್ಆರ್ ಐ) ಸಭೆಯಲ್ಲಿ ಹೇಳಿದ್ದ ಮನಮೋಹನ್ ಸಿಂಗ್ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿದ್ದರು.

ಒಳ್ಳೆಯ ದಿನಗಳು ಯಾವಾಗ ಬರುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಭವಿಷ್ಯದಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದ್ದರು, ಇದೆ ಘೋಷವಾಕ್ಯವನ್ನು ನರೇಂದ್ರ ಮೋದಿ ಅವರು ಹೇಳಿದ್ದರು ಅದೇ ಈಗ ನಮ್ಮ ಸರ್ಕಾರದ ಕೊರಳಿಗ ಹೊಣೆಯಾಗಿ ಪರಿಣಮಿಸಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

2014 ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅಚ್ಛೇ ದಿನ್ ಎಂಬ ಘೋಷ ವಾಕ್ಯವನ್ನು ಅತಿ ಹೆಚ್ಚು ಬಳಸಿದ್ದರು. ಒಳ್ಳೆಯ ದಿನಗಳು ಎಂದಿಗೂ ಬರುವುದಿಲ್ಲ ಆ ಘೋಷ ವಾಕ್ಯ ಏನಿದ್ದರೂ ಎನ್ ಡಿಎ ಸರ್ಕಾರದ ಕೊರಳಲ್ಲಿ ಸಿಲುಕಿರುವ ಮೂಳೆ ಎಂದು ಹೇಳಿದ್ದಾರೆ. ನಾವು ಹೇಳಿದ್ದ ಅಚ್ಛೇ ದಿನ್ ಎಂಬ ಘೋಷ ವಾಕ್ಯವನ್ನು ಅಕ್ಷರಶಃ ಪರಿಗಣಿಸಬೇಕಿಲ್ಲ, ಅದನ್ನು ಅಭಿವೃದ್ಧಿ ದೃಷ್ಟಿಯಿಂದ ಪರಿಗಣಿಸಬೇಕೆಂದು ನಿತಿನ್ ಗಡ್ಕರಿ ಹೇಳಿದ್ದಾರೆ.

SCROLL FOR NEXT