ಚಂಡಿಗಢ: ಪಂಜಾಬ್ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಿಜಿಥಾಯ್ ಅವರತ್ತ ಶೂ ಎಸೆದ ಘಟನೆ ಬುಧವಾರ ನಡೆದಿದೆ.
ಪ್ರತಿಪಕ್ಷಗಳ ಗದ್ದಲದ ನಡುವೆಯೇ ಪಂಜಾಬ್‌ನ ಎಸ್ಎಡಿ- ಬಿಜೆಪಿ ಸರ್ಕಾರ 10 ನಿಮಿಷದಲ್ಲಿ 12 ಮಸೂದೆ ಪಾಸ್ ಮಾಡಿದೆ. ಸರ್ಕಾರದ ಈ ಕ್ರಮ ಖಂಡಿಸಿ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಪೇಪರ್, ಪುಸ್ತಕಗಳನ್ನು ಸ್ಪೀಕರ್ ಕಡೆಗೆ ಎಸೆದರು. ಆದರೆ ಭದ್ರತಾ ಸಿಬ್ಬಂದಿ ಇದ್ದರಿಂದ ಅವು ಸ್ಪೀಕರ್‌ಗೆ ತಾಗಿಲ್ಲ.
ಇದೇ ವೇಳೆ ಕಾಂಗ್ರೆಸ್ ಶಾಸಕ ತರಲೋಚನ್ ಸುಂದ್ ಅವರು ಕಂದಾಯ ಸಚಿವ ಬಿಕ್ರಮ್ ಸಿಂಗ್ ಅವರತ್ತ ಶೂ ಎಸೆದಿದ್ದಾರೆ.
ಪ್ರತಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ಚರಣ್ ಜೀತ್ ಅತ್ವಾಲ್ ಅವರು ಶೂನ್ಯ ವೇಳೆ ಮತ್ತು ಪ್ರಶ್ತೋತ್ತರ ಅವಧಿಯನ್ನು ರದ್ದುಗೊಳಿಸಿದ್ದು, ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದ್ದಾರೆ.