ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 
ದೇಶ

ರಾಹುಲ್ ಗಾಂಧಿಯವರ 'ಕಾಟ್ ಸಭಾ'ದಲ್ಲಿ ಮತ್ತೊಮ್ಮೆ ಮಂಚಕ್ಕಾಗಿ ಹೊಡೆದಾಡಿದ ಜನತೆ

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಾರ್ವಜನಿಕ ಸಭೆ...

ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಾರ್ವಜನಿಕ ಸಭೆ ಮುಕ್ತಾಯವಾದ ಕೂಡಲೇ ಅಲ್ಲಿನ ಸ್ಥಳೀಯರು ಮಂಚಕ್ಕಾಗಿ ಜಗಳ ಮಾಡಿಕೊಂಡ ಘಟನೆ ಮತ್ತೊಮ್ಮೆ ನಡೆದಿದೆ. ಅಷ್ಟೇ ಅಲ್ಲ, ಕೆಲವೇ ಹೊತ್ತಿನಲ್ಲಿ ಅಲ್ಲಿಂದ ಮಂಚಗಳು ಕಣ್ಮರೆಯಾಗಿದವು.
ಸಾರ್ವಜನಿಕ ಸಭೆ ಆಯೋಜಿಸಿದ್ದ ಸಂಘಟಕರು ಧ್ವನಿವರ್ಧಕದಲ್ಲಿ ಮಂಚಗಳನ್ನು ಅಲ್ಲೇ ಬಿಟ್ಟು ಹೋಗಿ ಎಂದು ಕೂಗಿ ಹೇಳುತ್ತಿದ್ದರೂ ಕೂಡ ಅದನ್ನು ಕೇಳಿಯೂ ಕೇಳಿಸದಂತೆ ಸ್ಥಳೀಯರು ಮಂಚವನ್ನು ಹೊತ್ತುಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಮಂಚ ಸಿಗದವರು ತಮಗೆ ಮನೆಗೆ ಕೊಂಡುಹೋಗಲು ಮಂಚ ಸಿಗಲಿಲ್ಲವಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.
''ಇಂದು ಮಿರ್ಜಾಪುರದಲ್ಲಿ ರಾಹುಲ್ ಗಾಂಧಿಯವರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರೆ ಮಂಚ ನೀಡುತ್ತೇವೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಭರವಸೆ ನೀಡಿದ್ದರು. ಆದರೆ ಆ ಪಕ್ಷದವರು ನಮಗೆ ಏನೂ ಕೊಡಲಿಲ್ಲ ಅಂತ ಬೇಸರವಾಗುತ್ತಿದೆ.ನನಗೆ ಬಂದದ್ದಕ್ಕೆ ಸಿಕ್ಕಿದ್ದು ಇದೊಂದೇ ಎಂದು ಕಾಂಗ್ರೆಸ್ ಧ್ವಜವನ್ನು ತೋರಿಸಿಕೊಂಡು ಕೈಲಾಶ್ ನಾಥ್ ಕೇಸರಿ ಎಂಬವನು ಹೇಳಿದ್ದಾನೆ.
ತಮ್ಮ ಎರಡನೇ ಹಂತದ ಕಿಸಾನ್ ಯಾತ್ರೆಯನ್ನು ಇಂದು ಮಿಜೋರಂನಲ್ಲಿ ಆರಂಭಿಸಿದ ರಾಹುಲ್ ಗಾಂಧಿ ಮದಿಹಾನ್ ನಲ್ಲಿ ಕಾಟ್ ಸಭಾ ನಡೆಸಿದ್ದರು. ತಮ್ಮ ಎರಡನೇ ಹಂತದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಮಿರ್ಜಾಪುರ, ಬದೋಹಿ ಮತ್ತು ಅಲಹಾಬಾದ್ ಜಿಲ್ಲೆಗಳಲ್ಲಿ ಖಾಟ್ ಸಭಾ ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸಲಿದ್ದು ಒಟ್ಟು 164 ಕಿಲೋ ಮೀಟರ್ ಸಂಚರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!