ಸಚಿನ್ ತೆಂಡೂಲ್ಕರ್ 
ದೇಶ

ಕ್ರಿಕೆಟ್ ದೇವರ ದತ್ತು ಗ್ರಾಮದಲ್ಲಿ ಬುಡಕಟ್ಟು ಜನಾಂಗದವರಿಗೆ ಸಿಕ್ಕಿಲ್ಲ ವಾಸಕ್ಕೆ ಮನೆ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪುಟ್ಟಮರಾಜು ವಾರಿ..

ನೆಲ್ಲೂರು/ ತಿರುಪತಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ  ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪುಟ್ಟಮರಾಜು ವಾರಿ ಕಂಡ್ರಿಗಾ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ.

ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಗ್ರಾಮದಲ್ಲಿ ಈಗ ದಿನದ 24 ಗಂಟೆ ನೀರು ಮತ್ತು ವಿದ್ಯುತ್ ಸಂಪರ್ಕ, ಅಗಲವಾದ ಸಿಮೆಂಟ್ ರೋಡ್, ಟೈಲ್ಸ್ ಹಾಕಿದ ಪಾದಚಾರಿ ಮಾರ್ಗ, ಒಳಚರಂಡಿ ವ್ಯವಸ್ಥೆವನ್ನು ಮಾಡಲಾಗಿದೆ.

ಆದರೆ ರಸ್ತೆ ಅಗಲೀಕರಣಕ್ಕಾಗಿ ಮನೆ ಕಳೆದು ಕೊಂಡ ಸುಮಾರು 20 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವುದಾಗಿ ಸಚಿನ್ ತೆಂಡೂಲ್ಕರ್ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ.ಕಳೆದ 18 ತಿಂಗಳಿಂದ ಸೀನಯ್ಯ ಮತ್ತ ಇತರೆ 20 ಬುಡಕಟ್ಟು ಜನಾಂಗದ ಕುಟುಂಬಗಳು ಸೂರಿಗಾಗಿ ಕಾಯುತ್ತಿದ್ದಾರೆ.

2005 ರಲ್ಲಿ ವೆಲ್ಲೂರಿನ ಜಿಲ್ಲಾಧಿಕಾರಿ ರೇಖಾ ರಾಣಿ ಮತ್ತು ಸಚಿನ್ ತೆಂಡೂಲ್ಕರ್ ವಿಮಾನದಲ್ಲಿ ಒಟ್ಟಿಗೆ ಪ್ರಯಾಣ ಮಾಡುವಾಗ, ಆಕೆಯ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಕೇಳಿ ಸಚಿನ್ ಉತ್ಸುಕರಾದರು. ಅದಾದ ನಂತರ 115 ಕುಟುಂಬಗಳಿರುವ ವೆಲ್ಲೂರಿನ ವಾರಿ ಕಂಡ್ರಿಗಾ ಗ್ರಾಮವನ್ನು ದತ್ತು ಪಡೆಯಲು ಸಚಿನ್ ನಿರ್ಧರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸಂಸದ ಆದರ್ಶ ಗ್ರಾಮ ಯೋಜನೆಯಡಿ 2014ರಲ್ಲಿ ಸಚಿನ್ 150 ಮನೆಗಳಿರುವ ನೆಲ್ಲೂರಿನ ಪಿಆರ್ ಕಂಡ್ರಿಗಾ ಕುಗ್ರಾಮವನ್ನು ದತ್ತು ಸ್ವೀಕರಿಸಿದ್ದರು. ನಂತರ ಗ್ರಾಮಕ್ಕೆ ಭೇಟಿ ನೀಡಿದ ಸಚಿನ್ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಬುಡಕಟ್ಟು ಜನಾಂಗ ಸೀನಯ್ಯ ಮತ್ತು ಇತರೆ ಕುಂಟುಂಬಗಳನ್ನು ಭೇಟಿ ಮಾಡಿದ ಸಚಿನ್
ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡುವಂತೆ ಕೋರಿದರು. ಜೊತೆಗೆ ರಸ್ತೆ ಅಗಲೀಕರಣದಿಂದ ಮನೆಗಳಿಗೆ ಹಾನಿಯ ಉಂಟಾಗಲಿದ್ದು, ಅವರಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು.

ಒಂದೂವರೆ ವರ್ಷದಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ನಮಗೆ ಮಾತ್ರ ವಾಸಿಸಲು ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಬುಡಕಟ್ಟು ಜನಾಂಗ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಂದು ಸಚಿನ್ ಜೊತೆ ಗ್ರಾಮಕ್ಕೆ ಆಗಮಿಸಿದ್ದ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಗೊಂಡಿದ್ದಾರೆ. ಸಚಿನ್ ಇದುವೆರಗೂ ಮತ್ತೆ ಈ ಗ್ರಾಮಕ್ಕ ಭೇಟಿ ನೀಡಿಲ್ಲ,. ಹೀಗಾಗಿ ಮನೆ ನಿರ್ಮಿಸಿಕೊಡುವಂತೆ ಯಾರನ್ನು ಕೇಳುವುದು ಎಂಬುದು ತೋಚದೇ ಈ ಜನರಿಗೆ ದಿಕ್ಕೇ ತೋಚದಂತಾಗಿದೆ.

ಇದುವರೆಗೂ ಪ್ಲಾಸ್ಟಿಕ್ ಶೀಟ್ ಮನೆಯಲ್ಲಿ ಈ ಕುಟುಂಬಗಳು ವಾಸವಾಗಿದ್ದವು. ಆದರೆ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಈ ಮನೆಗಳು ವಾಸಕ್ಕೆ ಯೋಗ್ಯವಲ್ಲದ ಕಾರಣ ಶಾಲೆಯ ಆವರಣದಲ್ಲಿ ಅಥವಾ ಸಮುದಾಯ ಭವನಗಳಲ್ಲಿ ಇರಲು ಅವಕಾಶ ಮಾಡಿಕೊಡುವಂತೆ ಸೀನಯ್ಯ ಮನವಿ ಮಾಡಿದ್ದಾರೆ.

ಗುರುವಾರ ಪರ್ರಿ ಬಾಲಕೃಷ್ಣ ಎಂಬುವರು ಸಚಿನ್ ಸ್ನೇಹಿತ ಚಾಮುಂಡೇಶ್ವರಿ ನಾಥ್ ಎಂಬುವರನ್ನು ತಿರುಪತಿಯಲ್ಲಿ ಭೇಟಿ ಮಾಡಿ ಈ ವಿಷಯ ತಿಳಿಸಿದ್ದಾರೆ. ಆದರೆ ಚಾಮುಂಡೇಶ್ವರಿ ನಾಥ್ ಅವರಿಗೆ ಈ ಮನೆ ನಿರ್ಮಾಣ ಮಾಡಿ ಕೊಡುವ ಯಾವುದೇ ಮಾಹಿತಿ ತಿಳಿದಿಲ್ಲ ಎಂದು ಹೇಳಿದ್ದಾರೆ.

ಗ್ರಾಮದ ಅಭಿವೃದ್ಧಿಗೆ ಸಚಿನ್ ಅವರು ಸಂಸದರ ನಿಧಿಯಿಂದ 4 ಕೋಟಿ ರುಪಾಯಿ ಅನುದಾನ ನೀಡಿದ್ದು ನೆಲ್ಲೂರು ಜಿಲ್ಲಾಡಳಿತ 2.9 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಕೆಲ ಕ್ರಿಕೆಟಿಗರಿಂದಲೂ ಕೂಡ ಸಚಿನ್ ದೇಣಿಗೆ ಪಡೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT