ಪಾಟ್ನಾ: ತನ್ನ ಕಾರು ಓವರ್ ಟೇಕ್ ಮಾಡಿದ ಎಂಬ ಕಾರಣದಿಂದ ಆರ್‌ಜೆಡಿ ಶಾಸಕರೊಬ್ಬರ ಮಗ ವ್ಯಕ್ತಿಯೋರ್ವನಿಗೆ ಇರಿದು ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ಆರ್‌ಜೆಡಿ ಶಾಸಕ ವಿರೇಂದ್ರ ಸಿನ್ಹಾ ಅವರ ಪುತ್ರ ಕುನಾಲ್ ಪ್ರತಾಪ್ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಪಿಂಟು ಕುಮಾರ್ ಎಂಬಾತನ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪಿಂಟೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕರ ಪುತ್ರನನ್ನು ಪೊಲೀಸರು ಕಳೆದ ರಾತ್ರಿ ವಶಕ್ಕೆ ಪಡೆದಿದ್ದಾರೆ. ಬಳಿಕ ಆರ್‌ಜೆಡಿ ಬೆಂಬಲಿಗರು ಕುನಾಲ್ ಪ್ರತಾಪ್ ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆಯ ಮುಂದೆ ಆಗ್ರಹಿಸಿದ್ದಾರೆ.
ತಮ್ಮ ಪುತ್ರ ಯಾರಿಗೂ ಇರಿದಿಲ್ಲ. ಜೊತೆಗೆ ಸಂತ್ರಸ್ತನೆ ಬ್ಲೇಡ್‌ನಿಂದ ತನ್ನನ್ನು ತಾನು ಇರಿದುಕೊಂಡು ತಮ್ಮ ಪುತ್ರನ ವಿರುದ್ಧ ಆರೋಪಿಸುತ್ತಿದ್ದಾನೆ ಎಂದು ದೂರಿದ್ದಾರೆ. ಇದರಲ್ಲಿ ರಾಜಕೀಯ ಷಡ್ಯಂತ್ರವಿದ್ದು, ನಿಷ್ಪಕ್ಷಪಾತ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದು ಅವರು ಹೇಳಿದ್ದಾರೆ.