ಮುರುದ್: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುರುದ್ ಬೀಚ್ ನಲ್ಲಿ 32 ಅಡಿ ಉದ್ದದ ಮೃತ ಬ್ಲೂ ವೇಲ್ ಪತ್ತೆಯಾಗಿದೆ.
ದಕ್ಷಿಣ ಮಹಾರಾಷ್ಟ್ರ ಮತ್ತು ಮುಂಬಯಿ ಕರಾವಳಿ ತೀರದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಪತ್ತೆಯಾಗಿರು ಮೂರನೇ ಸತ್ತ ಬ್ಲೂ ವೇಲ್ ಇದಾಗಿದೆ.
ಸತ್ತಿರುವ ಬ್ಲೂ ವೇಲ್ ವಿಶೇಷತೆಗಳ ಬಗ್ಗೆ ಸಂಶೋದಕರ ಪರಿಶೀಲನೆ ನಡೆಸುತ್ತಿದ್ದಾರೆ. ಗುಜರಾತ್ ಕರಾವಳಿಯಲ್ಲಿ ಮೇ ಮತ್ತು ಜೂನ್ ನಲ್ಲಿ ಎರಡು ವೇಲ್ ಗಳು ಪತ್ತೆಯಾಗಿದ್ದವು. ಅದರಲ್ಲಿ ಒಂದು ಬ್ಲೂ ವೇಲ್ ಮತ್ತೊಂದು ಬ್ರೈಡ್ ವೇಲ್ ಆಗಿತ್ತು.
ಇತ್ತೀಚೆಗೆ ಬೀಚ್ ಗಳಲ್ಲಿ ವೇಲ್ ಗಳು ಸಾಯುವುದು ಹೆಚ್ಚಾಗಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಇದೇ ಅಲಿಬಾಗ್ ಬೀಚ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ವೇಲ್ ಪತ್ತೆಯಾಗಿತ್ತು.